ರೂಢಿ

ರೂಢಿಗೆ ತರುವೆವು ನಾವು ರೂಢಿಗೆ ತರುವೆವು
ಒಳ್ಳೆಯ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳುವೆವು

ಒಳ್ಳೆಯ ಅಭ್ಯಾಸ ಬಲದಿಂದ ಆಗುವೆವು ಪ್ರಬಲ
ಕೆಳಮಟ್ಟದ ಗುಣಗಳನ್ನು ಗೆಲ್ಲುವುದರಲ್ಲಿ ನಾವಾಗುವೆವು ಸಫಲ

ಮೊಟ್ಟ ಮೊದಲು ಕೇಳುವುದಿಲ್ಲ ನಮ್ಮ ಈ ಜಗ್ಗದ ಮನಸ್ಸು
ಮೊದಲು ಬಲು ಕಷ್ಟ ಅನಿಸುವುದು ಏಕೆ ಇದೆಲ್ಲಾ ಹೊಸ ಕಸರತ್ತು

ಉನ್ನತ ಸಂಕಲ್ಪಕ್ಕೆ ನೀಡಿ ನಾವು ಮೊಟ್ಟ ಮೊದಲ ಹಕ್ಕು
ಯಾರೂ ತಡೆಯಲಾರರು ದೃಢ ನಿರ್ಧಾರಕ್ಕೆ ನೀಡಿದ ಉನ್ನತ ಪಟ್ಟು

ನಮ್ಮಿಂದ ಆಗುವ ಅಡೆತಡೆಗಳನ್ನು ನಾವೇ ಸಂಹರಿಸಬಲ್ಲೆವು
ನಿರಾತಂಕದಿ ಪ್ರವಹಿಸುವುದು ನಮ್ಮ ಈ ಜೀವನದ ನೌಕೆಯು

ಬಾಳಿನಲ್ಲಿ ಸಫಲತೆ ಹೊಂದಲು ನೀಡುತಿರುವುದು ಇವು ತಾಕತ್ತು
ಪಡೆಯುವೆವು ಉಸಿರಾಟಕ್ಕೆ ಹೋಲುವ ಸಹಜ ಪ್ರಕ್ರಿಯೆಯ ಈ ಸಂಪತ್ತು.

5 thoughts on “ರೂಢಿ

  1. Developing good habits is important and can be tough as well. Very good topic. Nice poem. 🙏

  2. Actions lead to samskaras. Samskaras lead to habits. Habits motivates us to do more similar actions. A vicious cycle that makes people with good habits elevate themselves and those with bad habits degrade themselves..

    The poem nicely explains how one can change oneself for good by replacing bad habits with good habits..

Leave a Reply

Your email address will not be published. Required fields are marked *