ಎಲ್ಲಿ ಅಡಗಿದೆ ಸಂತೋಷ,ಸರಳತೆ ಎಲ್ಲೋ, ಆಡಂಬರ ದಲ್ಲೋಇದನು ಅರಿತರೆ, ಪಾಲಿಗೆ ಬಂದ ಗೆಲುವು,ಇದರ ತೋರುಗೋಲು, ಬಾಳಿಗೆ ತಿರುವು, ಬಾಳಿನ ಸಿಹಿ ಕ್ಷಣಗಳನು, ಮೆಲುಕಾಡಿಸು,ಮೂಡುವುದು, ರಸವತ್ತಾದ, ಸಿಹಿ ತಿನುಸು,ಅಧ್ಭುತ ಕ್ಷಣಗಳ, ಸ್ವಾದದ, ಎಂಥಾ ಸೊಗಸು,ಸವಿಯುತ್ತಾ ಕುಳಿತರೆ, ತುಂಬಿದ, ಸುಖ ಮನಸು. ಬಹಳ ಸರ್ವೇ ಸಾಮಾನ್ಯ, ಇವುಗಳ ಬಗೆ ಆಗಿದ್ದು,ಸರಳತೆಯಲ್ಲಿ ಉದ್ಭವಿಸಿ, ಆಡಂಬರವೇ ಇಲ್ಲದ್ದು,ಮುದವನು ಸೃಷ್ಟಿಸಿ, ನಗುವಾಗಿ ಸ್ಪೋಟಿಸಿದ್ದು,ಉಲ್ಲಾಸದ ಅಲೆಗಳಾಗಿ, ವಿಸ್ಮಯ ಗೊಂಡಿದ್ದು. ಹಣ ಕಾಸಿನ ನೆನಪು, ಸ್ಮೃತಿಯಿಂದ ಕಳಚಿ ಬಂದು,ಸಂಕೀರ್ಣವಲ್ಲದ ಸ್ವರೂಪ, ಸೆಳೆಯುವಿಕೆಯ ಬಿಂದು,ಕ್ಲಿಷ್ಟವಿಲ್ಲದ ಸಹಜ ಸ್ಥಿತಿ, ನಮ್ಮದೇ,Continue reading “ಅಡಗಿದೆ ಸಂತೋಷ”
Category Archives: Spūrtidāyaka
ಕನ್ನಡ ತಾಯಿ
ಮೊಟ್ಟಮೊದಲನೇ ಅಕ್ಷರಗಳ ತುತ್ತುನೀಡಿದ ನನ್ನ ಮಾತೃಭಾಷೆಗೆ ನಮೋಸ್ತು ಕಲಿತೆ ಮಾತನಾಡುವ ಪ್ರಕ್ರಿಯೆ ನಿನ್ನಿಂದತೊದಲುನುಡಿ ಇಂದ ಶಬ್ದಗಳ ಸರಳಿ ಎಷ್ಟು ನೀ ಚಂದ ನುಡಿಯುವುದನ್ನು ಕಲಿತೆ ನಿನ್ನ ಸುಂದರ ರೂಪದಿಂದಉಚ್ಚಾರ ವಾಕ್ ಶಕ್ತಿ ದೊರೆಯಿತು ನಿನ್ನ ಕೃಪೆಯಿಂದ ನಿನಗೆ ನಾನು ಚಿರರುಣಿ, ನಮಿಸುವೆ ಸದಾ ಸನ್ಮಾನನನ್ನ ಹೃದಯ ಕಮಲದಲ್ಲಿ ಕಟ್ಟಿರುವೆ ವಿಶೇಷ ವಾದ ಸ್ಥಾನ ನಿನ್ನೊಡನೆ ಕೂಡಿ ಬಾಳುವುದು ಅಭಿಮಾನ ಪ್ರೀತಿನೀನು ಮುತ್ತಿನಿಂದ ಕೂಡಿದ ಮೂರ್ತಿ, ಪ್ರಾಚೀನ ನಿನ್ನ ಕೀರ್ತಿ
ಆದರ್ಶ
ಜೀವನದಲ್ಲಿ ಆದರ್ಶವಾದಿ ವ್ಯಕ್ತಿಗಳು ಇರಬೇಕುಜೀವನಕ್ಕೆ ಸರಿ ದಾರಿ ಹೊಸ ಸ್ಪೂರ್ತಿ ನೀಡುವರಾಗಿರಬೇಕು ಯಾರನ್ನು ನಮ್ಮ ಆದರ್ಶದ ಎಣಿಕೆಯಲ್ಲಿ ಸೇರಿಸುವುದುಹೇಗೆ ಅರಿಯುವುದು ಇದನು ನಾವು ತಿಳಿಯುವುದು? ಮಿಂಚುವ ತಾರೆಗಳ್ಳಲ್ಲ ನಮಗೆ ನಿಜವಾದ ಮಾದರಿಅದು ನಟನೆಯ ಕಲೆ ಪ್ರತಿಭೆ, ಬೇಕಾಗಿರುವುದು ಒಳಗಿನ ಸಿರೀ ನಿಜ ಸನ್ನಿವೇಶದಲ್ಲಿನ ನಡತೆ ಇಂದ ಅನುಕರಣೀಯಾಸಣ್ಣ ಪುಟ್ಟ ಕೆಲಸದಲ್ಲೂ ತೋರುವರು ಉತ್ತಮ ವರ್ತನೆಯಾ ಬಾಳಿ ಬದುಕಿ ಗಳಿಸಿರುವ ತ್ಯಾಗದ ಉತ್ತಮ ಸಂಪತ್ತನ್ನಮುನ್ನುಗ್ಗಿ ನಿಸ್ವಾರ್ಥದಿ ಹೋರಾಡಿದ ಶ್ರೇಷ್ಠರನ್ನ ಇವರು ಜಗತ್ತಿನ ನಿಜವಾದ ಕಥಾನಾಯಕರು, ತಾರೆಗಳುಇವರನ್ನು ಅನುಸರಿಸಿ ಕಲಿಯಬೇಕುContinue reading “ಆದರ್ಶ”
ಜಡ
ಜಡ ನಾನಲ್ಲ ನಾನಾಗುವುದಿಲ್ಲ ಬಾಳಿನಲಿಪ್ರಾಣಶಕ್ತಿ ಹರಿಯುತ್ತಿದೆ ನನ್ನ ಈ ಬ್ರಹ್ಮಾಂಡದಲಿ ಕೂತಲ್ಲೇ ಕುಳಿತಿರುವುದಲ್ಲ ಚೇತನದ ಉಪದೇಶಬಾಳಿ ಬದುಕುವುದೇ ಈ ಜೀವಸತ್ವದ ದಿವ್ಯಸಂದೇಶ ವಸಂತ ಋತುವಿನ ಉತ್ಸಾಹ ಉಕ್ಕಿಹರಿಯುತಿದೆಶಕ್ತಿ ತುಂಬಿ ವ್ಯಾಪಿಸಿಕೊಳ್ಳಲು ತುಳುಕಾಡುತಿದೆ ಸೌಂದರ್ಯಯುಕ್ತ ಪರಿಮಳ ಎಲ್ಲೆಡೆ ಹರಡುತಿದೆನನ್ನ ವೇಗವ ಕಂಡು ಎಲ್ಲೆಡೆ ಸ್ಫೂರ್ತಿ ಹೊಂದುತಿದೆ ಸಮಯ ಕಳೆದುಕೊಳ್ಳುವುದಿಲ್ಲ ಅಲ್ಲಿಯತನಕಬಾಳಿ ತೋರಿಸುವೆ ಪಕ್ವವಾಗುವತನಕ.
ರೂಢಿ
ರೂಢಿಗೆ ತರುವೆವು ನಾವು ರೂಢಿಗೆ ತರುವೆವುಒಳ್ಳೆಯ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳುವೆವು ಒಳ್ಳೆಯ ಅಭ್ಯಾಸ ಬಲದಿಂದ ಆಗುವೆವು ಪ್ರಬಲಕೆಳಮಟ್ಟದ ಗುಣಗಳನ್ನು ಗೆಲ್ಲುವುದರಲ್ಲಿ ನಾವಾಗುವೆವು ಸಫಲ ಮೊಟ್ಟ ಮೊದಲು ಕೇಳುವುದಿಲ್ಲ ನಮ್ಮ ಈ ಜಗ್ಗದ ಮನಸ್ಸುಮೊದಲು ಬಲು ಕಷ್ಟ ಅನಿಸುವುದು ಏಕೆ ಇದೆಲ್ಲಾ ಹೊಸ ಕಸರತ್ತು ಉನ್ನತ ಸಂಕಲ್ಪಕ್ಕೆ ನೀಡಿ ನಾವು ಮೊಟ್ಟ ಮೊದಲ ಹಕ್ಕುಯಾರೂ ತಡೆಯಲಾರರು ದೃಢ ನಿರ್ಧಾರಕ್ಕೆ ನೀಡಿದ ಉನ್ನತ ಪಟ್ಟು ನಮ್ಮಿಂದ ಆಗುವ ಅಡೆತಡೆಗಳನ್ನು ನಾವೇ ಸಂಹರಿಸಬಲ್ಲೆವುನಿರಾತಂಕದಿ ಪ್ರವಹಿಸುವುದು ನಮ್ಮ ಈ ಜೀವನದ ನೌಕೆಯು ಬಾಳಿನಲ್ಲಿContinue reading “ರೂಢಿ”
ಪ್ರೋತ್ಸಾಹ
ಪ್ರೋತ್ಸಾಹ ನೀಡುವುದು ಒಂದು ಸಗುಣಕಾರಿಎಲ್ಲಕ್ಕೂ ತೋರುವುದು ಸ್ಪೂರ್ತಿಯ ದಾರಿ ಹಿಂಜರಿದವಗೆ ಕೊಡುವುದು ಪ್ರಯತ್ನದ ಹೆಜ್ಜೆಆತ್ಮವಿಶ್ವಾಸ ಇಲ್ಲದವಗೆ ಧರಿಸಲು ವಿಶ್ವಾಸದ ಗೆಜ್ಜೆ ಅಡಗಿರುವ ಪ್ರತಿಭೆಯ ಹೊರತೆರೆವ ರಸಮಾಲೆಹೆಚ್ಚೆಚ್ಚು ಮಾಡಲು ನೀಡುವ ಸುಗಂಧದ ಹೂಮಾಲೆ ಈ ಪ್ರೋತ್ಸಾಹದ ಹನಿಯಲ್ಲಿದೆ ಶಕ್ತಿಯ ಖಣಿಸಾಗರವನ್ನೇ ಸೃಷ್ಟಿಸ ಬಲ್ಲದು ಈ ಹೃದಯ ವಾಣಿ ನಿರುತ್ಸಾಹ ಕೊಲ್ಲುವುದು ಮೊಳಕೆಯಲ್ಲೇ ತಡಿಪ್ರೋತ್ಸಾಹಿಸೋಣ ಎಲ್ಲರೂ ಕೈ ನೀಡಿ
ಹೊಸತು
ಕಲಿಯುವುದನಾ ಅರಿತೇ, ಕಲಿಯುವುದನಾ ಅರಿತೇಹೊಸತನು ಕಲಿಯುವುದನಾ ಅರಿತೇ ಕಲಿಕೆ ಜೀವನದ ಅಭಿವ್ಯಕ್ತಿತುಂಬುವುದು ಬದುಕಿನಲ್ಲಿ ಆಸಕ್ತಿಜೀವನ ವಾಗುವುದು ಸಂವೃದ್ದಿಕಲಿಕೆಯಲ್ಲಿದೆ ಹೊಸ ನಿಧಿ ಕಲಿಕೆಯಲ್ಲಿಲ್ಲ ಭೇದಾಭಾವ ಮಾನಪುಟ್ಟದು ದೊಡ್ಡದು ಎಲ್ಲಾ ಸರಿಸಮಾನಹೊಸತು ನೀಡುವುದೂ ಬಹುಮಾನಕಲಿಕೆಯಲ್ಲಿದೆ ಯುವ ಚೇತನದ ಸನ್ಮಾನ
ಸಮಯ
ನನ್ನನ್ನು ಮರೆಯದಿರು, ನನ್ನನ್ನು ಮರೆಯದಿರು,ನನ್ನ ಮಹತ್ವವನ್ನು ಅರಿತುಕೊಂಡಿರು. ನಿನಗೆ ಬೇಕೆಂದಾಗ, ನಾ ಸಿಗದಿರ ಬಹುದು,ನಾನು ಇದ್ದಾಗ, ನೀನು ನನ್ನ ಮರೆಯ ಬಹುದು. ನಾನು ಇದ್ದಾಗ, ಒಳಿತು ಮಾಡು ನೀನು,ನನ್ನನ್ನು ವ್ಯರ್ಥ ಮಾಡದಿರು ನೀನು. ಆಮೇಲೆ, ನಾಳೆ, ಏನಬೇಡ, ಕೇಳು ನೀ,ಕೂಡಲೇ, ಮಾಡಿ ಮುಗಿಸು, ನಡೇ ನೀ, ಸಮಯ ಅನಂತ, ಏನಬೇಡ ನೀ,ನಾನು ಅನಂತ, ಇರುವೆ ಇಲ್ಲಿ,ನೀನು, ಸ್ವಲ್ಪ ಕ್ಷಣ ಮಾತ್ರ ಇಲ್ಲಿ.
ನಿದ್ರೆ
ನಿದ್ರೆಯಲ್ಲಿದೆ ಆರೋಗ್ಯ,ಇತಿಮಿತಿಯಾದ ನಿದ್ರೆಯಲ್ಲಿದೆ ಆರೋಗ್ಯ, ನಾನು ಹೇಳುವುದು ಏನೂ ಹೊಸತಲ್ಲ,ಹೇಳುವೆ ಪುನಃ, ಎಲ್ಲಾ ಮರೆತಿಹರಲ್ಲ, ಪ್ರಕೃತಿಯೊಂದಿಗೆ ಹೊoದಾಣಿಸು,ಪ್ರಕೃತಿ ಅನುಗುಣವಾಗಿ ನಿದ್ರಿಸು, ನಿದ್ರೆಯು ಐಚ್ಚಿಕವಲ್ಲ, ಖಡ್ಡಾಯ ವಯ್ಯ,ಆರೋಗ್ಯ ಕಾಪಾಡುವ ಒಂದು ಶಿಸ್ತಯ್ಯ, ಇತಿಮಿತಿಯಲ್ಲಿದ್ದರೆ ಸಹಾಯ,ಇಲ್ಲದಿದ್ದರೆ ಆಗುವುದು ತಾಪತ್ರಯ.
ಉತ್ಸಾಹ
ಜೀವನದಿ ಉತ್ಸಾಹ ದಿಂದಿರು,ಎನ್ನನು ಸಾಧಿಸುವಿ ಇಲ್ಲದಿ ನೀ, ಉತ್ಸಾಹ ಭರಿತ ಮನಸ್ಸುಎಲ್ಲವನ್ನು ಸಾಧಿಸುವುದುಇಲ್ಲದ ಮನಸ್ಸು, ಏನನ್ನು ಮಾಡುವುದು? ಅಡಗಿದೆ ಶಕ್ತಿ ನಿನ್ನಲ್ಲಿ ಅಪಾರ,ತೆರೆದರೆ, ಬರುವುದು, ಧಾರಕಾರ,ನೀಡು ಉತ್ಸಾಹದ ಕಿಡಿ ಅದಕ್ಕೆನೋಡು ವೈಯ್ಯುವುದು ನಿನ್ನನುಭುವಿ ಇಂದ ಆಕಾಶಕ್ಕೆಬೆಳೆಯುವೆ ನೀ ನಿರಂತರನೋಡು ನಿನ್ನ ಉತ್ಸಾಹದ ಪ್ರತಿಫಲ.
