ಕಳವಳ

ಏಕೆ ತಲ್ಲಣಗೊಂಡು ಬಾಳುತಿರುವೆ ಮನುಜ
ಕಳವಳಗೊಂಡು ಉಸಿರಾಡುತಿರುವೆ ಇದು ಅಸಹಜ

ನಾನು ನನ್ನದು ಎಂಬ ಭವಿಷ್ಯದ ಮೇಲಿನ ತಳ್ಳಂಕ
ನನ್ನದೆಲ್ಲವನು ಕಾಪಾಡಿಕೊಳ್ಳುವ ಈ ಒಳಗಿನ ಆತಂಕ

ಎಲ್ಲರೂ ನಮ್ಮವರೇ, ನೀನು ಬೇರೆಯಲ್ಲಾ ಸಜೀವಿಗಳಿಂದ
ಎಲ್ಲದರಲ್ಲೂ ಬಾಳಿ ಬದುಕುತ್ತಿರುವುದು ಒಂದೇ ಆ ದಿವ್ಯ ಆನಂದ

ಈ ಏಕತ್ವ ಭಾವನೆ ಮೂಡಿದ ಹೃದಯದಲಿ ಪ್ರೀತಯು ಅರಳುವುದು
ನಮ್ಮೇಲಿನ ತವಕದ ಹಿಡಿತ ಸಡಿಲಗೊಂಡು ಕಳಚೀ ಕಾಣೆಯಾಗುವುದು

ನೀನು ಈ ಶರೀರಕ್ಕೆ ಸೀಮಿತವಲ್ಲದ ಅಪರಿಮಿತವಾದ ಕಾಂತಿ
ಎಲ್ಲವನೂ ಮೀರಿ ವ್ಯಾಪಿಸಿಕೊಳ್ಳುವಂತಹ ಜ್ಞಾನದ ಬೆಳಕಿನ ಜ್ಯೋತಿ

3 thoughts on “ಕಳವಳ

Leave a Reply

Your email address will not be published. Required fields are marked *