ಆದರ್ಶ

ಜೀವನದಲ್ಲಿ ಆದರ್ಶವಾದಿ ವ್ಯಕ್ತಿಗಳು ಇರಬೇಕು
ಜೀವನಕ್ಕೆ ಸರಿ ದಾರಿ ಹೊಸ ಸ್ಪೂರ್ತಿ ನೀಡುವರಾಗಿರಬೇಕು

ಯಾರನ್ನು ನಮ್ಮ ಆದರ್ಶದ ಎಣಿಕೆಯಲ್ಲಿ ಸೇರಿಸುವುದು
ಹೇಗೆ ಅರಿಯುವುದು ಇದನು ನಾವು ತಿಳಿಯುವುದು?

ಮಿಂಚುವ ತಾರೆಗಳ್ಳಲ್ಲ ನಮಗೆ ನಿಜವಾದ ಮಾದರಿ
ಅದು ನಟನೆಯ ಕಲೆ ಪ್ರತಿಭೆ, ಬೇಕಾಗಿರುವುದು ಒಳಗಿನ ಸಿರೀ

ನಿಜ ಸನ್ನಿವೇಶದಲ್ಲಿನ ನಡತೆ ಇಂದ ಅನುಕರಣೀಯಾ
ಸಣ್ಣ ಪುಟ್ಟ ಕೆಲಸದಲ್ಲೂ ತೋರುವರು ಉತ್ತಮ ವರ್ತನೆಯಾ

ಬಾಳಿ ಬದುಕಿ ಗಳಿಸಿರುವ ತ್ಯಾಗದ ಉತ್ತಮ ಸಂಪತ್ತನ್ನ
ಮುನ್ನುಗ್ಗಿ ನಿಸ್ವಾರ್ಥದಿ ಹೋರಾಡಿದ ಶ್ರೇಷ್ಠರನ್ನ

ಇವರು ಜಗತ್ತಿನ ನಿಜವಾದ ಕಥಾನಾಯಕರು, ತಾರೆಗಳು
ಇವರನ್ನು ಅನುಸರಿಸಿ ಕಲಿಯಬೇಕು ಬಾಳಿನ ತತ್ವಗಳು.

5 thoughts on “ಆದರ್ಶ

Leave a Reply

Your email address will not be published. Required fields are marked *