ಲಭ್ಯ

ಪಡೆದು ಲಭಿಸುವುದೇ, ಅಂತರಂಗ ಶುದ್ಧಿ
ಸೇವೆ ಸಲ್ಲಿಸಿ, ಪುಣ್ಯಗಳಿಕೆ, ಮಲಿನ ರದ್ದಿ

ಮೇಲ್ನೋಟಕ್ಕೆ ತಿಳಿಯದು ಇದರ ಗುಟ್ಟು
ಕೊಟ್ಟವನೇ ಪಡೆಯುವನು, ಶಾಂತಿಯ ನಂಟು

ನಮ್ಮ ಅರಿವಿಗೆ ಬರುವುದು, ಕಾಲಕ್ರಮೇಣ
ಒಳ ಶ್ರೀಮಂತಿಕೆ ಹೆಚ್ಚಿ, ಬಣ್ಣ ಬಣ್ಣದ ಆಭರಣ

ಅದರ ಎಣಿಕೆ ಈಗ ಬೇಡವಾದದ್ದು
ಮಾಡೋಣ ಸ್ವಧರ್ಮವನು, ಬೇಗ ಹೊದ್ದು

ಪುಣ್ಯ ಕಾರ್ಯಗಳನು ಸ್ವೀಕರಿಸೋಣ
ಕರ್ಮದ ಮಾರ್ಗದಲ್ಲಿ, ನಿಸ್ವಾರ್ಥವ ಬೆಳೆಸೋಣ

3 thoughts on “ಲಭ್ಯ

  1. 🙏🙏👌👌ತುಂಬಾ ಚೆನ್ನಾಗಿದೆ. ಹೀಗೆ ಮುಂದುವರಿಸಿ. ಭಗವಂತ ಒಳ್ಳೆಯದು ಮಾಡಲಿ.

Leave a Reply

Your email address will not be published. Required fields are marked *