
ಸೂರ್ಯನ ಶಾಕ, ಪ್ರೇಮದ ಸೆರೆಗೆ,
ಸೋಮನ ಚೆಲುವು, ತಂಪಿನ ಬೆಸುಗೆ.
ತಾರೆಯ ಕಂಬಳಿ, ತವಕದ ಹೊದಿಗೆ,
ಪ್ರಕೃತಿಯ ಸೊಬಗು, ಒಲವಿನ ಅಪ್ಪುಗೆ.
ಪರಿಶುದ್ಧತೆಯು ನಿಸರ್ಗದ ಶೀಲ ಚಿನ್ನೆ,
ನಿರಂತರ ಮಿಡಿಯುವ ಅನಂತ ವೀಣೆ.
ಮನಕೆ ನಾಟಿತು ಪ್ರಕೃತಿಯ ನಾದ, ಕರುಣೆ,
ಶೃತಿಯ ಅರಿವು ನನ್ನ ಬಾಳಿನ ಅನ್ವೇಷಣೆ.
ಇದರ ವೈಶಿಷ್ಟ್ಯದ ಶುದ್ಧ ರಾಗದ ಸೆಳೆತ,
ಸಿಹಿ ಗಾನವು, ಒಳ ಅಡಗಿರುವ ಮಿಡಿತ
ನುಡಿಸಿ ಶೃತಿಯಲಿ ನಾ ಆದೆ ಮುಗ್ಧ, ಸತತ
ಸಿರಿ ಲಹರಿ, ಸಾಮರಸ್ಯ, ಸುಗಮ ಅನವರತ.
.

Naa Prakriti- The poems are becoming better and better. Thoughts and feelings flowing smoothly and getting converted to the right words almost unconsciously – hallmark of poetry that flows easily. Hope to see more and more.
Super
ಪ್ರಕೃತಿ ಮತ್ತು ಮಾನವ ಸ್ವಭಾವದ ಅದ್ಭುತ ಸಂಬಂಧವನ್ನು ವರ್ಣಿಸುವ ಸುಂದರ ಕವನ.👌👍
Meaningful poem with appropriate words….