ನಾ ಪ್ರಕೃತಿ…

ಸೂರ್ಯನ ಶಾಕ, ಪ್ರೇಮದ ಸೆರೆಗೆ,ಸೋಮನ ಚೆಲುವು, ತಂಪಿನ ಬೆಸುಗೆ.ತಾರೆಯ ಕಂಬಳಿ, ತವಕದ ಹೊದಿಗೆ,ಪ್ರಕೃತಿಯ ಸೊಬಗು, ಒಲವಿನ ಅಪ್ಪುಗೆ. ಪರಿಶುದ್ಧತೆಯು ನಿಸರ್ಗದ ಶೀಲ ಚಿನ್ನೆ,ನಿರಂತರ ಮಿಡಿಯುವ ಅನಂತ ವೀಣೆ.ಮನಕೆ ನಾಟಿತು ಪ್ರಕೃತಿಯ ನಾದ, ಕರುಣೆ,ಶೃತಿಯ ಅರಿವು ನನ್ನ ಬಾಳಿನ ಅನ್ವೇಷಣೆ. ಇದರ ವೈಶಿಷ್ಟ್ಯದ ಶುದ್ಧ ರಾಗದ ಸೆಳೆತ,ಸಿಹಿ ಗಾನವು, ಒಳ ಅಡಗಿರುವ ಮಿಡಿತನುಡಿಸಿ ಶೃತಿಯಲಿ ನಾ ಆದೆ ಮುಗ್ಧ, ಸತತಸಿರಿ ಲಹರಿ, ಸಾಮರಸ್ಯ, ಸುಗಮ ಅನವರತ. .

ಒಳ ಚಕ್ಷು

ಒಳ ಚಕ್ಷುವಿನ ಜಾಗೃತಿ,ನೋಟದಲಿನ ದೃಶ್ಯಾವಳಿಯ ಅನುಭೂತಿ,ಬದಲು ಒಳಗೆ, ಆಂತರ್ಯ ಕೊಟ್ಟ ಸ್ಪೂರ್ತಿ,ಸೂಸಿ ಹೊರಗೆ, ಆತ್ಮಸಾಕ್ಷಿ ಎಲ್ಲೆಡೆ ಪ್ರತಿಬಿಂಬಿಸಿ. ಪಡೆದೆ ನಾ ಪ್ರೀತಿ ವಿಶ್ವಾಸದ ಧೃಡತೆ,ಎಲ್ಲಾ ನಮ್ಮವರೇ ಎನ್ನುವ ಆತ್ಮೀಯತೆ,ವ್ಯತ್ಯಾಸವ ಜಯಿಸಿದ ಸ್ನೇಹದ ಈ ಭವ್ಯತೆ,ಸಂಭಂದಗಳ ಮೂಲ ಪ್ರೀತಿಯ ಪಾವಿತ್ರ್ಯತೆ. ವಿಶಾಲತೆಯ ಪ್ರತಿಚ್ಚಾಯೆ, ಕಣದಲ್ಲೆಲ್ಲ ತ್ರಾಣ,ನಿರ್ಮಲತೆಯ ತುಳುಕಾಡಿಕೆ, ಕಣ್ಣುಗಳಲಿ ಕರುಣ,ಇಡೀ ಸೃಷ್ಟಿಯೇ ಆಯಿತು ನನ್ನ ಪ್ರೀತಿಯ ರಮಣ,ಮುಗ್ಧತೆ ಎಲ್ಲೆಡೆ ವ್ಯಕ್ತ, ಆದೆ ನಾ ನಿನಗೆ ಶರಣ. .

ಪ್ರೀತಿ

ಎತ್ತರವನು ಅಳೆಯಲಾಗದುಆಳವನು ತಿಳಿಯಲಾಗದು ಅನಂತತೆಯಲ್ಲಿ, ಅಚಲತೆಯ ಗಣಿಅತ್ಯುನ್ನತ ಜ್ಯೋತಿ, ಉಜ್ವಲ, ದಿವ್ಯ ಮಣಿ ಇದರ ಹುಟ್ಟು, ಪರಮಾತ್ಮನ ಸೊತ್ತುಎಲ್ಲರಲ್ಲೂ ಇಟ್ಟಿರುವನು, ಈ ಸಂಪತ್ತು ಒಗಟಿನ ಗಲಿಬಿಲಿಯಲ್ಲಿ ನಮ್ಮನು ಸೇರಿಸಿಇಂದ್ರಿಯಗಳನು ಬಹಿರ್ಮುಖ ಗೊಳಿಸಿ ನಮ್ಮಿಂದಲೇ ಮರೆಮಾಚಿ, ನಮ್ಮೊಳಗೆ ಬಚ್ಚಿಟ್ಟುಇರುವುದನ್ನೇ ಹುಡುಕುವಂತೆ ಮಾಡಿ, ಅದ ಗುಟ್ಟು ನಿಸ್ಸ್ವಾರ್ಥತೆಯಲ್ಲಿ ಅಡಗಿ ಕುಳಿತಿದೆ, ಈ ಹೊನ್ನುಮಾಡಿರುವೆ ಬಯಲು, ಪರಮೇಶ್ವರನ ರಹಸ್ಯವನ್ನು ಅನುದಿನದ ಸಾಧನೆ, ಏರಿಕೆ, ಪರಿಶುದ್ಧತೆಯ ಸಮೃದ್ಧಿಅರಿವಿಗೆ – ನಿಗೂಢ ಪ್ರೀತಿಯ ಕೊಡುಗೆ, ಇದೇ ಶ್ರೀ ಸಿದ್ಧಿ.

ಹೃದಯ ಮಂದಿರ

ಮನಸಿಗೆ ಎಂತಹ ಸಾಂತ್ವನ, ಮನದಟ್ಟು ಆಗಿರಲುಇನ್ನು ಮರೆಯಾಗಿರದು, ಅಮೃತದ ಈ ಕಡಲುನನ್ನಲ್ಲಿದ್ದರೆ ನನಗೇಕೆ ಆತಂಕ, ಚಿಂತೆಗೆ ಸೋಲುನನ್ನಲಿ ಅಡಗಿ ಕೂತಿದೆ, ಆಸೆ ಅದನು ಪಡೆಯಲು ಇಡೀ ಜಗತನ್ನೇ ಹುಡುಕಾಡಿ, ಕೊಟ್ಟಿತು ಬಿಸಿ ಕಾವುಹುಡುಕಾಡಿಕೆ ನನ್ನಲ್ಲೇ, ಅದರ ಅರಿವೇ, ರುಚಿ ಮಾವುನಿಶ್ಚಲ ಕುಳಿತು, ಅಂತರಂಗದ ಶೋಧನೆ, ಸಿಹಿ ಮೇವುಒಳಗೆ ಮನ ಹರಿಯಲು, ಅಗಲುವುದು ಕಹಿ ನೋವು ಪೂರ್ಣಿಮೆಗೆ ಚಂದಿರ ಪ್ರಕಟಿಸುವನು, ಇಡೀ ತನ್ನ ರಹಸ್ಯಸೌಂದರ್ಯ ಸಂಪೂರ್ಣ ಬಯಲು, ಎಂತಹ ಆ ದೃಶ್ಯಪಾವಿತ್ರ್ಯತೆ ಹೆಚ್ಚುತ್ತಾ, ತಮಸ್ಸಿನ ಇಳಿತ, ಕೊನೆಗೆ ಅಂತ್ಯದೊರೆಯಿತು,Continue reading “ಹೃದಯ ಮಂದಿರ”

ಉತ್ಕೃಷ್ಟ ಧರ್ಮ

ಅತ್ಯುನ್ನತ ಸಂದೇಶ, ನಮ್ಮದಾಗಿದೆಬಾಳುವ ಕಲೆಯನ್ನು, ತಿಳಿಸಲಾಗಿದೆ ಎಲ್ಲವು, ದೈವೀ ಸೃಷ್ಟಿಯಿಂದ, ನಿರ್ಮಿತವಾಗಿದೆಎಲ್ಲವು, ದೈವೀ ಶಕ್ತಿಯಿಂದ, ವ್ಯಾಪಿಸಿಕೊಂಡಿದೆ ಸೃಷ್ಟಿಯ ನಿರ್ಮಾಣ, ನಿರ್ಮಲ ಪ್ರೀತಿಯ ಚಿತ್ರಣಪಡೆದುಕೊಳ್ಳೋಣ, ಈ ಪ್ರೀತಿಯ ಅಪ್ಪಟ ಗುಣ ವಿಶ್ವಾಸ ಉಳ್ಳವರು, ಭಕ್ತಿಭಾವದಿಂದ ಬಾಳುವರುಕೇವಲ ದೇಗುಲದಲ್ಲಿ ಮಾತ್ರ, ಹುಡುಕಾಡದಿಹರು ನಮ್ಮನ್ನು ಇದು ಸೆಳೆಯುತ್ತಿದೆ, ಸತತವಾಗಿ ತನ್ನೆಡೆಗೆಪ್ರಾಪ್ತಿಸಲು ಹಾತೊರೆಯೋಣ, ಬಾಗಿ ನಮ್ಮೊಳಗೆ.

ತಿಳಿ

ತಿಳಿಯಾಗ ಬಯಸುವೆನು ನಾನುಪದರಗಳನು, ಕಳಚಿ ಹಾಕುವೆನು ನಾನು ಏನೆಲ್ಲಾ ಅಭಿಪ್ರಾಯಗಳಲ್ಲಿ, ಸಿಲುಕಿರುವೆಎಷ್ಟೆಲ್ಲಾ, ಇಷ್ಟಗಳಲಿ ಬಾಳುತಿರುವೆ ಈ ಮನಸ್ಸಿನ ಅಲೆಗಳಲಿ, ಈಜುತಿರುವೆಪುನಃ ಪುನಃ, ಅದರಲ್ಲೇ ಮುಳುಗುತಿರುವೆ ನನ್ನ ಭಾವನೆಗಳನ್ನು ಅಮಲಗೊಳಿಸುವೆನನ್ನ ಮನಸನ್ನು ಎತ್ತರಕ್ಕೆ ಕರೆದೊಯ್ಯುವೆ ನಾನೇ ನನ್ನನ್ನು ಸ್ವಲ್ಪ ಬದಿಗಿಡುವೆಇತರರ ಭಾವನೆಗಳನ್ನು ಅರಿಯುವೆ ನಾನೆಂಬುದು, ನನಲ್ಲಿ, ತಿಳಿಯಾಗುತಿಹುದುನನ್ನ ಧೃಷ್ಟಿಕೋಣದಲಿ, ಜಗತ್ತು, ಬದಲಾಗುತಿಹುದು

ಹಾರುವ ಚಿಟ್ಟೆ

ಒಂದು ಹೂವಿನಿಂದ ಮತ್ತೂಂದುಹೂವಿಗೆ, ಹಾರುತಿರುವೆ ನಾನು,ನನ್ನ ಬಣ್ಣವನ್ನೇ ಅರಿಯದಬಣ್ಣ ಬಣ್ಣದ ಚಿಟ್ಟೆ ನಾನು ಹೂದೋಟದಿಂದ ಹೂದೋಟಕ್ಕೆಉಲ್ಲಾಸದಿ ಹೋಗುವೆನು ನಾನು,ಕುಸುಮದಿಂದ ಕುಸುಮಕ್ಕೆ ಹಾರಿಜೇನನ್ನು ಹುಡುಕುವೆನು ನಾನು ವರ್ಣಮಯ ತೋಟದಲಿ ನಿರಂತರಹುಡುಕಾಡಿ, ಜೇನನ್ನು ಸವಿಯುತ್ತಾ,ಪ್ರತಿ ದಿನ ಈ ಮರುಳುಗೊಳಿಸುವಸೆಳೆಯುವಿಕೆಯಲ್ಲಿ ಸಿಲುಕಿ ಸ್ವಾದಿಸುತ್ತಾ ತೃಪ್ತಿಯನು ಪಡೆಯಲಿಲ್ಲ ನಾನಿನ್ನೂತಿಳಿಯಲಾರೆ ಏಕೋ ನಾನಿದನ್ನು,ಮನವು ಪುನಃ ಹಾತೊರೆಯುತ್ತಿದೆಹುಡುಕ ಹೊರಟಿರುವೆ ಮಧುವನ್ನು

ಸ್ವೀಕಾರ

ಶ್ರದ್ದೆ ಇದ್ದಲ್ಲಿ ಒಪ್ಪಿಕೊ ಒಪ್ಪಿಕೊ ಎಲ್ಲವನುಸ್ವೀಕರಿಸು ವ್ಯಥೆ ಪಡದೆ, ದೈವೀ ಇಚ್ಚ್ಛೆಯನು ಅರಿಯಲು ನಮಗೆ ಆದೀತೆ ಈ ಮರ್ಮದ ಗುಟ್ಟನ್ನುನಮ್ಮನ್ನು ಮೀರಿದ ಅಖಂಡ ಕಾರ್ಯವಿಧಾನವನು ನಿಸ್ವಾರ್ಥತೆಯು ನಮ್ಮ ಪಾಲಿಗೆ, ಅದೃಷ್ಟ ಭಾಗ್ಯನಡೆಸುವನು ನಮ್ಮ ಒಳತಿಗಾಗಿ, ನಮ್ಮದೇ ಸೌಭಾಗ್ಯ ಸರಳವಾದ ದಾರಿ, ಶರಣಾಗತಿ ತೋರಿರುವನುಅದನ್ನು ಸ್ವೀಕರಿಸಿದವ, ಸುಲಭದಿ, ಗುರಿ ಮುಟ್ಟುವನು ಏತಕ್ಕೆ ಆತಂಕ, ಬಿಡು, ಇಲ್ಲ ಇದರಲ್ಲಿ ಅಡೆತಡೆದಾರಿಯು ತೋರುತಿದೆ, ಸಂತಸ ಚಿಮ್ಮುತ ಮುನ್ನಡೆ

ತಬ್ಬಲಿಯು ನಾನಲ್ಲ

ತಬ್ಬಲಿಯು ನಾನಲ್ಲ ತಬ್ಬಲಿಯು ನಾನಲ್ಲಇದನರಿತು ಬಾಳುವುದು ಸುಲಭವಾಯಿತಲ್ಲ ಚಿಂತೆಯನು ನಿನಗೆ ಒಪ್ಪಿಸುವಂತೆ ಆಗಿಸು ನನ್ನ ದೇವಾನಿನ್ನ ಸದ್ಗುಣಗಳನ್ನು ಅರಿಯಲು ನೀಡು ಆಸಕ್ತಿ ನನಗೆ ಬೇಗ ಸುಗುಣ ಸುಲಭದಿ ಅಭಿವೃದ್ಧಿ ಹೊಂದಲೆಂದು ನನ್ನ ಕೋರಿಕೆಸತ್ಕಾರ್ಯದಿ ಮನವು ಹರಿಯಲ್ಪಡಲೆಂದು ನಿನ್ನಲ್ಲಿ ಬೇಡಿಕೆ ನಿನ್ನ ಕೈಹಿಡಿದು ನಡೆಯುವುದೇ ಬಾಳಿನ ಪಥದ ನನ್ನಲ್ಲಿನ ಕಾಮನೆನೀನು ತೋರಿದ ಮಾರ್ಗದಲಿ ನಡೆಯವುದೇ ಧ್ಯೇಯ ಚಿಂತನೆ ನೀನೆ ನನ್ನ ನಂದಾದೀಪ ಇನ್ನುಳಿದುದು ಎಲ್ಲಾ ನಶ್ವರ ರೂಪನಿಜವಾದ ಪ್ರೀತಿ ನಿನ್ನಲ್ಲಿನ ಜ್ಯೋತಿ ತೋರಿಸು ನನಗೇ ನಿನ್ನ ಸ್ವರೂಪ.

ವಿಶ್ವಾಸವೇ ಪ್ರೀತಿ

ವಿಶ್ವಾಸವು ಎಲ್ಲೆಡೆ ಕೇಳಿ ಬರುತ್ತಿದೆ,ಕಾಣಿಸುವದು, ಬಹಳ ವಿರಳ ಏಕಿದೆ?ವಿಶ್ವಾಸ ಇದ್ದಲ್ಲಿ, ಪ್ರೀತಿ ಮಿನುಗುವ ತಾರೆ.ವಿಶ್ವಾಸದ ಅಳತೆ, ಪ್ರೀತಿಯ ಆಳ,ಪರಸ್ಪರ ನೇರ ಸಂಬಂಧ ಹೊಂದಿವೆ.ಎರಡು, ಪ್ರತ್ಯೇಕ ಪ್ರತ್ಯೇಕ ಇರುವುದುಂಟೆ?ವಿಸ್ವಾಸದ ತಿರುಳು, ಪ್ರೀತಿ ಕಾಣಿರೋ.ಪ್ರೀತಿ,  ವಿಸ್ವಾಸ, ಒಂದೇ, ಎರಡಲ್ಲ,ಅನುಭವಿಸಿಕೊಂಡು, ಧನ್ಯರಾಗಿರೋ.