
ನಾನಾಗುವೆ ಹರಿಯುವ ಹೊಳೆಯರೀತಿ
ಹರಿದಾಡುವುದೆ ನನ್ನ ಸಹಜವಾದ ಸ್ಥಿತಿ
ನಿಂತರೆ ನಿಂತಲ್ಲೇ ಉಳಿದುಬಿಡುವೆನಲ್ಲಾ
ಬಿಸಿಲಿನ ತಾಪಕ್ಕೆ ಹಿಂಗು ಹೋಗುವೆನಲ್ಲಾ
ನಿಂತ ನೀರಾಗಿ ಆಗುವೇ ಅನ್ಹರ ರೂಪಾ
ಕಳೆದುಕೊಂಡು ನನ್ನ ನಿರ್ಮಲಕರ ಸ್ವರೂಪ
ಹರಿಯುವ ನದಿ ಚಲಿಸುವುದು ಮೋಜಿನಿಂದ
ಹೊಸತಾಗಿಯೇ ಕೊನೆಯ ಉಸಿರತನಕ ಆನಂದದಿಂದ
ಎಲ್ಲೆಡೆ ಸಾರಿ ನೀಡುವುದು ಜೀವಿಗಳಿಗೆ ಹರುಷನೂತನ
ಹರಿಯುವ ಹೊಳೆಯ ನೀರೂ ಶುಭ್ರ ಪಾನೀಯವನ
ಹೊಳೆಯಲ್ಲಿದೆ ಪ್ರಾಣ ಸಡಗರ ಆಲಿಂಗನದ ಆಸಕ್ತಿ
ಝುಳು ಝುಳು ಗಾಯನ ನರ್ತನದಿಂದ ಅಭಿವ್ಯಕ್ತಿ
ಅದರ ಮನಸ್ಸು ಒಂದರಲ್ಲೇ ಕೂಡಿ ಸಂಪೂರ್ಣ ಭರ್ತಿ
ಯಾವ ಚಿಂತನೆಯು ಇಲ್ಲದೆ ಬಾಳುವುದು ಗಡಿಗೆ ತುಂಬಿ ಪ್ರಾಪ್ತಿ

ಕವನ ಚೆನ್ನಾಗಿ ಮೂಡಿಬಂದಿದೆ 👍👍👍👍👍👍👍👍👍
Ow gd