ನಾನಾಗುವೆ ಹರಿಯುವ ಹೊಳೆಯರೀತಿಹರಿದಾಡುವುದೆ ನನ್ನ ಸಹಜವಾದ ಸ್ಥಿತಿ ನಿಂತರೆ ನಿಂತಲ್ಲೇ ಉಳಿದುಬಿಡುವೆನಲ್ಲಾಬಿಸಿಲಿನ ತಾಪಕ್ಕೆ ಹಿಂಗು ಹೋಗುವೆನಲ್ಲಾನಿಂತ ನೀರಾಗಿ ಆಗುವೇ ಅನ್ಹರ ರೂಪಾಕಳೆದುಕೊಂಡು ನನ್ನ ನಿರ್ಮಲಕರ ಸ್ವರೂಪ ಹರಿಯುವ ನದಿ ಚಲಿಸುವುದು ಮೋಜಿನಿಂದಹೊಸತಾಗಿಯೇ ಕೊನೆಯ ಉಸಿರತನಕ ಆನಂದದಿಂದಎಲ್ಲೆಡೆ ಸಾರಿ ನೀಡುವುದು ಜೀವಿಗಳಿಗೆ ಹರುಷನೂತನಹರಿಯುವ ಹೊಳೆಯ ನೀರೂ ಶುಭ್ರ ಪಾನೀಯವನ ಹೊಳೆಯಲ್ಲಿದೆ ಪ್ರಾಣ ಸಡಗರ ಆಲಿಂಗನದ ಆಸಕ್ತಿಝುಳು ಝುಳು ಗಾಯನ ನರ್ತನದಿಂದ ಅಭಿವ್ಯಕ್ತಿಅದರ ಮನಸ್ಸು ಒಂದರಲ್ಲೇ ಕೂಡಿ ಸಂಪೂರ್ಣ ಭರ್ತಿಯಾವ ಚಿಂತನೆಯು ಇಲ್ಲದೆ ಬಾಳುವುದು ಗಡಿಗೆ ತುಂಬಿ ಪ್ರಾಪ್ತಿ
Category Archives: Nisarga
ಹೂವು
ನೀನಾಗು ನೀನಾಗು ಹೂವಿನಂತಾಗುಎಲ್ಲೆಡೆ ಪರಿಮಳ ಸೂಸುವಂತಾಗು ಹೂವಿನಲ್ಲಿದೆ ಅರಳುವ ಸೌಂದರ್ಯ ಪಾನ,ಪರಿಮಳ ಸೂಸುವ ಪ್ರಕ್ರಿಯೆಯ ಜ್ಞಾನಅದ ನೋಡಿ ಹರುಷ ಗೊಳ್ಳುವೆವು,ಅದ ಬೇಕೆಂದು ಹಂಬಲಿಸುವೆವು. ಹೂವಿನ ಜೀವನ ಸಮಯ ಬಹಳ ಅಲ್ಪ,ಬಾಳಿ ಬದುಕುವುದು ಅದರ ಸಂಕಲ್ಪ,ಹರಡುವುದು ಎಲ್ಲೆಡೆ ಅನಂದ ತ್ವರಿತ,ಜೀವನದ ಸೊಗಸು ಸುಗಂಧ ಭರಿತ.
ಮಳೆ
ಕುಣಿದಾಡು ನಲಿ ನಲಿ ದಾಡು,ಮಳೆಯ ಕಂಡು, ಕುಣಿ ನಲಿ ದಾಡು ಗುಡುಗು ಸಿಡಿಲಿನಿಂದ ಹುಟ್ಟುವುದು ಮಳೆಎತ್ತರದಿಂದ ಬಿದ್ದರು ಇರುವುದು ತಂಪು ಹೊಳೆ ಎಲ್ಲೆಡೆ ಬಿದ್ದು ಹರಡುವುದು ಸುರಿಮಳೆಪ್ರಕೃತಿಯ ಆಲಿಂಗನ ಆಗುವುದು ಕೂಡಲೇ. ಎಲ್ಲೆಡೆ ಕಾಣುವುದು ಮಳೆಯ ಕಾಂತಿಎಲ್ಲೆಡೆ ಪ್ರಕೃತಿಯ ಪ್ರಕಟ ಹಸಿರು ಶಾಂತಿ ಯಾರು ಅರಿತಿಹರು ಇದನ್ನು ಪೂರ್ತಿತಾಯಿಯ ಸಮಾನ ಇದರ ಗುಣ ಕೀರ್ತಿ.
