ಪ್ರೀತಿಯ ಸಂಕೇತ

a man and a woman assisting a girl while jumping
a man and a woman assisting a girl while jumping

ಪ್ರೀತಿ ಇದೆ ಎನ್ನುವುದು ಒಳ್ಳೆಯದು
ಪ್ರೀತಿ ಇರುವುದರಿಂದಲೇ ಇವೆಲ್ಲಾ ಏನ್ನುವುದು

ಗೌರವದ ವರ್ತನೆ, ನಿಜವಾದ ಸರಿ ಪರೀಕ್ಷೆಗೆ
ಗೌರವ ತೋರುವಿರಾ ನೀವು ನಿಮ್ಮ ಪ್ರೀತಿಗೆ
ಪ್ರೀತಿ ನಿಜವಾದಲ್ಲೀ, ಸನ್ಮಾನವ ತೋರುವಿರೀ
ಪ್ರೀತಿಯಿಂದಕೂಡಿ ಸೇವೆ ತ್ವರಿತ ಮಾಡುವಿರೀ

ಎಲ್ಲಾ ಪ್ರೀತಿಯ ವಸ್ತುವಿಗೆ, ಅದರದೇ ಇದೇ ಸ್ಥಾನ
ಕೊಡುವಿರೀ ಅದಕ್ಕೆ, ಅರ್ಹವಾದ ಮಾನ ಸಮ್ಮಾನ
ನಮ್ಮೆಲ್ಲರ ಜೀವನದಲ್ಲಿ ಇರುವುದು ಆ ವಿಶೇಷ ವಸ್ತು
ಕಾಯಾ ವಾಚಾ ಮನಸಾ, ಭಾವನಾತ್ಮಕದೀ ಜಗಜಗಿಸಿದ್ದು
ಅದನ್ನು ವ್ಯಕ್ತಿತ್ವದಲ್ಲಿ ಅಳವಡಿಸಿ, ಅರ್ಥೈಸಿಸೀ ಬಿತ್ತಿದ್ದು

ಪ್ರೀತಿಯಲ್ಲಿಲ್ಲಾ ನಾನೆಂಬುದು, ಅದಲ್ಲ ಪ್ರೀತಿಯಸಾರ
ಮೇಲು ಕೀಳು ಇವೆಲ್ಲಕ್ಕೆ ಇಲ್ಲಾ ಇಲ್ಲಿ ಆಹ್ವಾನದ ದ್ವಾರ
ನಿನ್ನ ಸಂತೋಷದಲ್ಲಿ ನನ್ನ ಸಂತೋಷವು ಅಡಗಿರುವುದು
ಇದೇ ಅತಿ ಅಮೂಲ್ಯ, ಅತಿ ಶ್ರೇಷ್ಠ, ಪ್ರೀತಿಯ ಗುಣ ಸಂಕೇತ
ಇನ್ನಾವುದರಲ್ಲಿ ಇದೇ ಹೇಳಿ ಈ ಸುಂದರ ವೈಶಿಷ್ಟ್ಯದ ಪ್ರತೀಕ

3 thoughts on “ಪ್ರೀತಿಯ ಸಂಕೇತ

  1. 🙏ಪ್ರೀತಿ ತುಂಬಾ ಪ್ರೀತಿಯಾಗಿ ಚೆನ್ನಾಗಿದೆ. ವರಮಹಾಲಕ್ಷ್ಮಿ ಹಬ್ಬದ ಹಾರ್ಧಿಕ ಶುಭಾಶಯಗಳು 🧘🏻‍♀️🙏🕉️

Leave a Reply

Your email address will not be published. Required fields are marked *