ಕನ್ನಡ ತಾಯಿ

ಮೊಟ್ಟಮೊದಲನೇ ಅಕ್ಷರಗಳ ತುತ್ತುನೀಡಿದ ನನ್ನ ಮಾತೃಭಾಷೆಗೆ ನಮೋಸ್ತು ಕಲಿತೆ ಮಾತನಾಡುವ ಪ್ರಕ್ರಿಯೆ ನಿನ್ನಿಂದತೊದಲುನುಡಿ ಇಂದ ಶಬ್ದಗಳ ಸರಳಿ ಎಷ್ಟು ನೀ ಚಂದ ನುಡಿಯುವುದನ್ನು ಕಲಿತೆ ನಿನ್ನ ಸುಂದರ ರೂಪದಿಂದಉಚ್ಚಾರ ವಾಕ್ ಶಕ್ತಿ ದೊರೆಯಿತು ನಿನ್ನ ಕೃಪೆಯಿಂದ ನಿನಗೆ ನಾನು ಚಿರರುಣಿ, ನಮಿಸುವೆ ಸದಾ ಸನ್ಮಾನನನ್ನ ಹೃದಯ ಕಮಲದಲ್ಲಿ ಕಟ್ಟಿರುವೆ ವಿಶೇಷ ವಾದ ಸ್ಥಾನ ನಿನ್ನೊಡನೆ ಕೂಡಿ ಬಾಳುವುದು ಅಭಿಮಾನ ಪ್ರೀತಿನೀನು ಮುತ್ತಿನಿಂದ ಕೂಡಿದ ಮೂರ್ತಿ, ಪ್ರಾಚೀನ ನಿನ್ನ ಕೀರ್ತಿ

ಪ್ರೀತಿಯ ಸಂಕೇತ

ಪ್ರೀತಿ ಇದೆ ಎನ್ನುವುದು ಒಳ್ಳೆಯದುಪ್ರೀತಿ ಇರುವುದರಿಂದಲೇ ಇವೆಲ್ಲಾ ಏನ್ನುವುದು ಗೌರವದ ವರ್ತನೆ, ನಿಜವಾದ ಸರಿ ಪರೀಕ್ಷೆಗೆಗೌರವ ತೋರುವಿರಾ ನೀವು ನಿಮ್ಮ ಪ್ರೀತಿಗೆಪ್ರೀತಿ ನಿಜವಾದಲ್ಲೀ, ಸನ್ಮಾನವ ತೋರುವಿರೀಪ್ರೀತಿಯಿಂದಕೂಡಿ ಸೇವೆ ತ್ವರಿತ ಮಾಡುವಿರೀ ಎಲ್ಲಾ ಪ್ರೀತಿಯ ವಸ್ತುವಿಗೆ, ಅದರದೇ ಇದೇ ಸ್ಥಾನಕೊಡುವಿರೀ ಅದಕ್ಕೆ, ಅರ್ಹವಾದ ಮಾನ ಸಮ್ಮಾನನಮ್ಮೆಲ್ಲರ ಜೀವನದಲ್ಲಿ ಇರುವುದು ಆ ವಿಶೇಷ ವಸ್ತುಕಾಯಾ ವಾಚಾ ಮನಸಾ, ಭಾವನಾತ್ಮಕದೀ ಜಗಜಗಿಸಿದ್ದುಅದನ್ನು ವ್ಯಕ್ತಿತ್ವದಲ್ಲಿ ಅಳವಡಿಸಿ, ಅರ್ಥೈಸಿಸೀ ಬಿತ್ತಿದ್ದು ಪ್ರೀತಿಯಲ್ಲಿಲ್ಲಾ ನಾನೆಂಬುದು, ಅದಲ್ಲ ಪ್ರೀತಿಯಸಾರಮೇಲು ಕೀಳು ಇವೆಲ್ಲಕ್ಕೆ ಇಲ್ಲಾ ಇಲ್ಲಿ ಆಹ್ವಾನದ ದ್ವಾರನಿನ್ನContinue reading “ಪ್ರೀತಿಯ ಸಂಕೇತ”

ಸ್ಪೂರ್ತಿದಾಯಕ ಶಿಕ್ಷಕ

ಶಿಕ್ಷಕರು ಮಾಡುವ ಕಾರ್ಯ ಬಹಳ ಉನ್ನತವಾದದ್ದುಗುರು ಪ್ರಭಾವವು ನಮನ್ನು ರೂಪಾಂತರಿಸುವುದು ಯಶಸ್ಸು ಹೊಂದಲು ಶಿಕ್ಷಕರ ಪಾತ್ರವು ಪ್ರಮುಖವಾದದ್ದು ಜ್ಞಾನದ ಪಾಠದ ಜ್ಯೋತಿಯು ನಮ್ಮಲಿ ಪ್ರಜ್ವಲಿಸುವುದು ಶ್ರೇಯಸ್ಕರ ವಾಗಿರುವುದನ್ನು ನಮಗೆ ತಿಳಿ ಹೇಳುವರುಅಹಿತಕರವಾದುದನ್ನು ಒಳಗಿನಿಂದ ತೊಳೆದು ಹಾಕುವರು ಕೃತಜ್ಞತೆಯಿಂದ ಕೂಡಿ ನಮಿಸೋಣ ಶಿಕ್ಷಕರ ಈ ವೃತ್ತಿದುಡ್ಡಿನಲ್ಲಿ ಇಲ್ಲ ನಮನ್ನು ಮಾರ್ಪಾಡು ಮಾಡುವ ಶಕ್ತಿ ಭಕ್ತಿ ಭಾವದಿಂದ ಕೂಡಿ ನಾವು ಗೌರವ ತೋರೋಣವಿನಮ್ರತೆಯಿಂದ ನಾವು ಪರಿವರ್ತನೆ ಹೊಂದೋಣ

ಮಗನ ಪ್ರೀತಿ

ಬಹಳ ಪ್ರೀತಿ ನನಲ್ಲಿ ಬಹಳ ಪ್ರೀತಿಸುಲಭದಿ ಅರಿಯಲಾಗದು ಈ ಪ್ರೀತಿ ಮೊದಲು ವರ್ತಿಸುವನು ಕೋಪದಿಮಾತನಾಡುವನು ಮುಂಗೋಪದಿಕರೆದರೆ ಹೇಳುವನು, ನಾ ಒಲ್ಲೆಅದಕ್ಕೆ ಹೇಳುವೆ ನಾ, ನಾ ಬಲ್ಲೆ. ಬರುವನು ಪ್ರೀತಿಯ ತೋರುವನುತಬ್ಬಿ ಕೊಂಡು ಮುದ್ದಾಡುವನುತನ್ನ ಬಲು ಇಷ್ಟದಿ ತಿಂಡಿ ಹಂಚುವನುಬೇಡವೆಂದರೂ ಪ್ರೀತಿಯಿಂದ ತಿನ್ನಿಸುವನು ತಾಯಿಗೆ ತಿಳಿದಿದೆ ಮಗನ ಪ್ರೀತಿಅಡಗದು ನನ್ನ ದೃಷ್ಟಿ ಕೋಣದಿಬಹಳ ಪ್ರೀತಿ  ನನಲ್ಲಿ ಬಹಳಪ್ರೀತಿಸುಲಭದಿ ಅರಿತೆ ನಾ ಈ ಪ್ರೀತಿ.

ಕೈ ತುತ್ತು

ಅಮ್ಮನ ಕೈ ತುತ್ತು ಬಲು ಇಷ್ಟಮರೆಯ ಲಾಗದ ರುಚಿ, ಸ್ವಾದಿಷ್ಟ ಕೈತ್ತುತ್ ಎಂದರೆ, ಬಲೂ ಹಸಿವು,ಇಲ್ಲದಿದ್ದರೂ ತಿನ್ನುವೇವು ಸವಿದುತುಂಬದು ಹೊಟ್ಟೆ, ಅದರ ಆಸ್ವಾದಕೊಡುವುದು, ಅತಿಯಾದ ವಿನೋದ ಎಲ್ಲರು ಸೇರಿದರೆ, ಬಲು ಕಷ್ಟ,ಕಚ್ಚಾಡುವೆವು, ಎಲ್ಲರು ನನಗಿಷ್ಟ,ಕಾತುರದಿ ಕಾಯುವೆವು ಚಪ್ಪರಿಸುತ್ತ,ಸ್ವಾದಿಸುತ ತಿನ್ನುವೆವು ನಾವು ಬಿಸೀ ತುತ್ತ ಹೊಟ್ಟೆ ತುಂಬಿದ್ದೆ ನಮಗೆ ಬೇಸರಮತ್ತಷ್ಟು ನಮಗೆ ತಿನ್ನುವ ಹಾತೊರಆಗುವೆವು ಆರೋಗ್ಯದಿಂದ ನಾವು ಬಲಿಷ್ಟತುತ್ತಿನ ಮಹಿಮೆ ತಿಂದವ ಬಲ್ಲ, ಎಂಥ ಶ್ರೇಷ್ಟ