ಸ್ವೀಕಾರ

ಶ್ರದ್ದೆ ಇದ್ದಲ್ಲಿ ಒಪ್ಪಿಕೊ ಒಪ್ಪಿಕೊ ಎಲ್ಲವನು
ಸ್ವೀಕರಿಸು ವ್ಯಥೆ ಪಡದೆ, ದೈವೀ ಇಚ್ಚ್ಛೆಯನು

ಅರಿಯಲು ನಮಗೆ ಆದೀತೆ ಈ ಮರ್ಮದ ಗುಟ್ಟನ್ನು
ನಮ್ಮನ್ನು ಮೀರಿದ ಅಖಂಡ ಕಾರ್ಯವಿಧಾನವನು

ನಿಸ್ವಾರ್ಥತೆಯು ನಮ್ಮ ಪಾಲಿಗೆ, ಅದೃಷ್ಟ ಭಾಗ್ಯ
ನಡೆಸುವನು ನಮ್ಮ ಒಳತಿಗಾಗಿ, ನಮ್ಮದೇ ಸೌಭಾಗ್ಯ

ಸರಳವಾದ ದಾರಿ, ಶರಣಾಗತಿ ತೋರಿರುವನು
ಅದನ್ನು ಸ್ವೀಕರಿಸಿದವ, ಸುಲಭದಿ, ಗುರಿ ಮುಟ್ಟುವನು

ಏತಕ್ಕೆ ಆತಂಕ, ಬಿಡು, ಇಲ್ಲ ಇದರಲ್ಲಿ ಅಡೆತಡೆ
ದಾರಿಯು ತೋರುತಿದೆ, ಸಂತಸ ಚಿಮ್ಮುತ ಮುನ್ನಡೆ

2 thoughts on “ಸ್ವೀಕಾರ

Leave a Reply

Your email address will not be published. Required fields are marked *