ಉತ್ಕೃಷ್ಟ ಧರ್ಮ

ಅತ್ಯುನ್ನತ ಸಂದೇಶ, ನಮ್ಮದಾಗಿದೆ
ಬಾಳುವ ಕಲೆಯನ್ನು, ತಿಳಿಸಲಾಗಿದೆ

ಎಲ್ಲವು, ದೈವೀ ಸೃಷ್ಟಿಯಿಂದ, ನಿರ್ಮಿತವಾಗಿದೆ
ಎಲ್ಲವು, ದೈವೀ ಶಕ್ತಿಯಿಂದ, ವ್ಯಾಪಿಸಿಕೊಂಡಿದೆ

ಸೃಷ್ಟಿಯ ನಿರ್ಮಾಣ, ನಿರ್ಮಲ ಪ್ರೀತಿಯ ಚಿತ್ರಣ
ಪಡೆದುಕೊಳ್ಳೋಣ, ಈ ಪ್ರೀತಿಯ ಅಪ್ಪಟ ಗುಣ

ವಿಶ್ವಾಸ ಉಳ್ಳವರು, ಭಕ್ತಿಭಾವದಿಂದ ಬಾಳುವರು
ಕೇವಲ ದೇಗುಲದಲ್ಲಿ ಮಾತ್ರ, ಹುಡುಕಾಡದಿಹರು

ನಮ್ಮನ್ನು ಇದು ಸೆಳೆಯುತ್ತಿದೆ, ಸತತವಾಗಿ ತನ್ನೆಡೆಗೆ
ಪ್ರಾಪ್ತಿಸಲು ಹಾತೊರೆಯೋಣ, ಬಾಗಿ ನಮ್ಮೊಳಗೆ.

2 thoughts on “ಉತ್ಕೃಷ್ಟ ಧರ್ಮ

  1. “ವಿಶ್ವಾಸ ಉಳ್ಳವರು, ಭಕ್ತಿಭಾವದಿಂದ ಬಾಳುವರು
    ಕೇವಲ ದೇಗುಲದಲ್ಲಿ ಮಾತ್ರ, ಹುಡುಕಾಡದಿಹರು” — ಕವಿತೆಯ ಸಾರಾಂಶವನ್ನು ಈ ಎರಡು ಸಾಲುಗಳಲ್ಲಿ ಎಷ್ಟು ಚೆನ್ನಾಗಿ ಹೇಳಲಾಗಿದೆ!! ಧನ್ಯವಾದಗಳು. 🙏

Leave a Reply

Your email address will not be published. Required fields are marked *