ಒಳಗೂ ಹೊರಗೂ

ಏಕೆ ವ್ಯತ್ಯಾಸ ಇರುವುದು ನಮಲ್ಲಿ ಬಂಧು
ನಾವು ಇರುವುದು ಒಂದು, ಏತಕ್ಕೆ ಇಷ್ಟೊಂದು

ಒಳಗೊಂದು ಬಾಳು ಬಾಳುತಿರುವೆ
ಹೊರಗೊಂದು ರೀತಿಯಲಿ ಅರಳಿರುವೆ

ಒಂದು, ಅನೇಕವಾಗಿ, ಗೊಂದಲದಿ ಸಿಲುಕಿರುವೆ
ನಿನ್ನನು ನೀನೆ ಮರೆಮಾಚಿ, ತಬ್ಬಿಬ್ಬಾಗಿರುವೆ

ಕಾಯಾ, ವಾಚಾ, ಮನಸಾ, ನೀಯಾರೆಂಬುದನು ತಿಳಿ
ಅದಕೆ ಅನುಗುಣವಾಗಿ, ನೀ ಎತ್ತರಕ್ಕೆ ಬೆಳಿ

ತುಂಬಿದ ನಿರ್ಮಲ ಅಮೃತ, ಅಡಗಿಹುದು ತೇಜಸ್ಸು
ಅದನು ಪ್ರಾಪ್ತಿಹೊಂದುವುದೇ, ಈ ಬಾಳ್ವೆಯ ಯಶಸ್ಸು

6 thoughts on “ಒಳಗೂ ಹೊರಗೂ”

  1. So meaningful and real. I hope each one of us can relate to this. I also love the pictures you use on your poems. They represent the essence of the poem so beautifully. Keep up the good work on the blog 👍

  2. 🙏🙏👍👍👌👌ತುಂಬ ಸುಂದರವಾದ ಕವನ. ಕನ್ನಡ ಕವನಗಳು ಎಲ್ಲರಿಗೂ ತಲುಪುವ ಮೂಲಕ ನಮ್ಮ ಕನ್ನಡದ ಕಂಪು ಎಲ್ಲೆಡೆ ಹರಡಲಿ. ಹಾರ್ದಿಕ ಶುಭಾಶಯಗಳು

Leave a Reply

Your email address will not be published. Required fields are marked *