ಆಭಿಪ್ರಾಯಗಳು

ಈ ಅಭಿಪ್ರಾಯಗಳಲಿ, ಏಕಿದೆ ಇಂಥ ತಾಕತ್ತುಹೊಗಳಿಕೆಯು ಎತ್ತರಕ್ಕೆ ಉಬ್ಬಿಸಿ, ಆ ಗತ್ತುತೆಗಳಿಕೆಯು ಮೇಲಿಂದ ಬೀಳಿಸಿದ, ಈ ಪೆಟ್ಟುಟಕಾಟಿಕಿ ಇದು, ಅಡಗಿದೆ ಎಲ್ಲಿ, ಸ್ಥಿರತೆಯ ಗುಟ್ಟು? ಈ ಅಭಿಪ್ರಾಯಗಳಿಗೆ ಅಂಟಿಕೊಳ್ಳದೆ, ಸ್ವೀಕರಿಸೋಣಚಕ್ರವ್ಯೂಹದಲಿ ಸಿಲುಕದೆ, ಈಗ ಜಾಗರೂಕರಾಗೋಣಇವೆಲ್ಲಾ ಲೌಕಿಕ, ಅಸ್ಥಿರ, ತುಸುಹೊತ್ತಿನ ಅಬ್ಬರಮಳೆ ಬಿರುಗಾಳಿಯ, ಹಾದುಹೋಗುವಿಕೆಯ ಗದ್ದಲ ಇದರಿಂದ ಪಾರಾಗಲು, ಇರುವುದು ಶ್ರೇಷ್ಠ ಉಪಾಯಖಂಡಿತ ಪಡೆಯುವೆವು ಇದರಿಂದ, ಸ್ಥಿರತೆ ಅಪಾರನಮನ್ನು ಅರಿಯುವುದು, ನಮ್ಮಲ್ಲಿಯೇ ಇದೆ ಆಧಾರಇದು ನಮ್ಮೊಳಗಿನ ಆತ್ಮಕನ್ನಡಿಯ, ಅಮೃತ ವಿಚಾರ ಆತ್ಮವನ್ನು ಅವಲಂಬಿಸಿಕೊಳ್ಳೋಣ, ಹಾಕಿ ಅರ್ಜಿಪ್ರಾಮಾಣಿಕ ಪ್ರತಿಬಿಂಬ, ಇದೊಂದೇContinue reading “ಆಭಿಪ್ರಾಯಗಳು”

ಒಳಗೂ ಹೊರಗೂ

ಏಕೆ ವ್ಯತ್ಯಾಸ ಇರುವುದು ನಮಲ್ಲಿ ಬಂಧುನಾವು ಇರುವುದು ಒಂದು, ಏತಕ್ಕೆ ಇಷ್ಟೊಂದು ಒಳಗೊಂದು ಬಾಳು ಬಾಳುತಿರುವೆಹೊರಗೊಂದು ರೀತಿಯಲಿ ಅರಳಿರುವೆ ಒಂದು, ಅನೇಕವಾಗಿ, ಗೊಂದಲದಿ ಸಿಲುಕಿರುವೆನಿನ್ನನು ನೀನೆ ಮರೆಮಾಚಿ, ತಬ್ಬಿಬ್ಬಾಗಿರುವೆ ಕಾಯಾ, ವಾಚಾ, ಮನಸಾ, ನೀಯಾರೆಂಬುದನು ತಿಳಿಅದಕೆ ಅನುಗುಣವಾಗಿ, ನೀ ಎತ್ತರಕ್ಕೆ ಬೆಳಿ ತುಂಬಿದ ನಿರ್ಮಲ ಅಮೃತ, ಅಡಗಿಹುದು ತೇಜಸ್ಸುಅದನು ಪ್ರಾಪ್ತಿಹೊಂದುವುದೇ, ಈ ಬಾಳ್ವೆಯ ಯಶಸ್ಸು

ಸ್ಪೂರ್ತಿದಾಯಕ ಶಿಕ್ಷಕ

ಶಿಕ್ಷಕರು ಮಾಡುವ ಕಾರ್ಯ ಬಹಳ ಉನ್ನತವಾದದ್ದುಗುರು ಪ್ರಭಾವವು ನಮನ್ನು ರೂಪಾಂತರಿಸುವುದು ಯಶಸ್ಸು ಹೊಂದಲು ಶಿಕ್ಷಕರ ಪಾತ್ರವು ಪ್ರಮುಖವಾದದ್ದು ಜ್ಞಾನದ ಪಾಠದ ಜ್ಯೋತಿಯು ನಮ್ಮಲಿ ಪ್ರಜ್ವಲಿಸುವುದು ಶ್ರೇಯಸ್ಕರ ವಾಗಿರುವುದನ್ನು ನಮಗೆ ತಿಳಿ ಹೇಳುವರುಅಹಿತಕರವಾದುದನ್ನು ಒಳಗಿನಿಂದ ತೊಳೆದು ಹಾಕುವರು ಕೃತಜ್ಞತೆಯಿಂದ ಕೂಡಿ ನಮಿಸೋಣ ಶಿಕ್ಷಕರ ಈ ವೃತ್ತಿದುಡ್ಡಿನಲ್ಲಿ ಇಲ್ಲ ನಮನ್ನು ಮಾರ್ಪಾಡು ಮಾಡುವ ಶಕ್ತಿ ಭಕ್ತಿ ಭಾವದಿಂದ ಕೂಡಿ ನಾವು ಗೌರವ ತೋರೋಣವಿನಮ್ರತೆಯಿಂದ ನಾವು ಪರಿವರ್ತನೆ ಹೊಂದೋಣ

ವಿಶ್ವಾಸವೇ ಪ್ರೀತಿ

ವಿಶ್ವಾಸವು ಎಲ್ಲೆಡೆ ಕೇಳಿ ಬರುತ್ತಿದೆ,ಕಾಣಿಸುವದು, ಬಹಳ ವಿರಳ ಏಕಿದೆ?ವಿಶ್ವಾಸ ಇದ್ದಲ್ಲಿ, ಪ್ರೀತಿ ಮಿನುಗುವ ತಾರೆ.ವಿಶ್ವಾಸದ ಅಳತೆ, ಪ್ರೀತಿಯ ಆಳ,ಪರಸ್ಪರ ನೇರ ಸಂಬಂಧ ಹೊಂದಿವೆ.ಎರಡು, ಪ್ರತ್ಯೇಕ ಪ್ರತ್ಯೇಕ ಇರುವುದುಂಟೆ?ವಿಸ್ವಾಸದ ತಿರುಳು, ಪ್ರೀತಿ ಕಾಣಿರೋ.ಪ್ರೀತಿ,  ವಿಸ್ವಾಸ, ಒಂದೇ, ಎರಡಲ್ಲ,ಅನುಭವಿಸಿಕೊಂಡು, ಧನ್ಯರಾಗಿರೋ.