ಆಭಿಪ್ರಾಯಗಳು

ಈ ಅಭಿಪ್ರಾಯಗಳಲಿ, ಏಕಿದೆ ಇಂಥ ತಾಕತ್ತು
ಹೊಗಳಿಕೆಯು ಎತ್ತರಕ್ಕೆ ಉಬ್ಬಿಸಿ, ಆ ಗತ್ತು
ತೆಗಳಿಕೆಯು ಮೇಲಿಂದ ಬೀಳಿಸಿದ, ಈ ಪೆಟ್ಟು
ಟಕಾಟಿಕಿ ಇದು, ಅಡಗಿದೆ ಎಲ್ಲಿ, ಸ್ಥಿರತೆಯ ಗುಟ್ಟು?

ಈ ಅಭಿಪ್ರಾಯಗಳಿಗೆ ಅಂಟಿಕೊಳ್ಳದೆ, ಸ್ವೀಕರಿಸೋಣ
ಚಕ್ರವ್ಯೂಹದಲಿ ಸಿಲುಕದೆ, ಈಗ ಜಾಗರೂಕರಾಗೋಣ
ಇವೆಲ್ಲಾ ಲೌಕಿಕ, ಅಸ್ಥಿರ, ತುಸುಹೊತ್ತಿನ ಅಬ್ಬರ
ಮಳೆ ಬಿರುಗಾಳಿಯ, ಹಾದುಹೋಗುವಿಕೆಯ ಗದ್ದಲ

ಇದರಿಂದ ಪಾರಾಗಲು, ಇರುವುದು ಶ್ರೇಷ್ಠ ಉಪಾಯ
ಖಂಡಿತ ಪಡೆಯುವೆವು ಇದರಿಂದ, ಸ್ಥಿರತೆ ಅಪಾರ
ನಮನ್ನು ಅರಿಯುವುದು, ನಮ್ಮಲ್ಲಿಯೇ ಇದೆ ಆಧಾರ
ಇದು ನಮ್ಮೊಳಗಿನ ಆತ್ಮಕನ್ನಡಿಯ, ಅಮೃತ ವಿಚಾರ

ಆತ್ಮವನ್ನು ಅವಲಂಬಿಸಿಕೊಳ್ಳೋಣ, ಹಾಕಿ ಅರ್ಜಿ
ಪ್ರಾಮಾಣಿಕ ಪ್ರತಿಬಿಂಬ, ಇದೊಂದೇ ಅಪರಂಜಿ
ಇನ್ನ್ಯಾವುದರಲ್ಲಿದೆ, ಈ ಉಜ್ವಲ, ಸ್ಥಿರತೆಯ ಭಂಗಿ
ಆಶ್ರಯಿಸಿಕೊಂಡರೆ ಆಗುವುದು, ಅತ್ಯುತ್ತಮ ಸಂಧಿ

ಧೃಡವಾಗೋಣ ಆಂತರ್ಯದ, ಆಧಾರದ ಮೇಲೆ
ನಾವು, ನಮ್ಮಲ್ಲೇ ನೆಲೆ ನಿಲ್ಲುವುದು, ಉತ್ತಮ ಶಾಲೆ
ಅನಂತ, ಶಾಂತಿ ಸಂತೋಷ, ನಮ್ಮ ಪರಮಶಕ್ತನ ಬೆಲೆ
ಆತ್ಮಜ್ಞಾನದಿಂದ ತುಂಬಿ ಆಗುವೆವು, ಶಾಂತ ವಿವೇಕ ಶಿಲೆ.

2 thoughts on “ಆಭಿಪ್ರಾಯಗಳು

  1. ಅಭಿಪ್ರಾಯ ಗಳು ತುಂಬಾ ಚೆನ್ನಾಗಿದೆ ಒಳ್ಳೇ ಅಭಿಪ್ರಾಯ 9ಬೇರೆಯವರ ಅಭಿಪ್ರಾಯ ಏನೇ ಇರಲಿ ನಿಂದಾ ಸ್ತುತಿ ಹೊಗಳಿಕೆ ಯಾವುದಕ್ಕೂ ಅಂಟಿಕೊಳ್ಳದೆ ಇವೆಲ್ಲವು ಆಸ್ತಿರ ಎಂದು ತಿಳಿದು ಅದರಿಂದ ಪಾ ರಾಗುವ ಬಗೆ ಈ ಪದ್ಯ ತಿಳಿಸಿ ಕೊಡುತ್ತದೆ ವಿಶ್ಲೇಷಣೆ ಚೆನ್ನಾಗಿ ಮೂಡಿ ಬಂದಿದೆ. ಶೇಷೋ

Leave a Reply

Your email address will not be published. Required fields are marked *