ಪ್ರೀತಿ

ಎತ್ತರವನು ಅಳೆಯಲಾಗದು
ಆಳವನು ತಿಳಿಯಲಾಗದು

ಅನಂತತೆಯಲ್ಲಿ, ಅಚಲತೆಯ ಗಣಿ
ಅತ್ಯುನ್ನತ ಜ್ಯೋತಿ, ಉಜ್ವಲ, ದಿವ್ಯ ಮಣಿ

ಇದರ ಹುಟ್ಟು, ಪರಮಾತ್ಮನ ಸೊತ್ತು
ಎಲ್ಲರಲ್ಲೂ ಇಟ್ಟಿರುವನು, ಈ ಸಂಪತ್ತು

ಒಗಟಿನ ಗಲಿಬಿಲಿಯಲ್ಲಿ ನಮ್ಮನು ಸೇರಿಸಿ
ಇಂದ್ರಿಯಗಳನು ಬಹಿರ್ಮುಖ ಗೊಳಿಸಿ

ನಮ್ಮಿಂದಲೇ ಮರೆಮಾಚಿ, ನಮ್ಮೊಳಗೆ ಬಚ್ಚಿಟ್ಟು
ಇರುವುದನ್ನೇ ಹುಡುಕುವಂತೆ ಮಾಡಿ, ಅದ ಗುಟ್ಟು

ನಿಸ್ಸ್ವಾರ್ಥತೆಯಲ್ಲಿ ಅಡಗಿ ಕುಳಿತಿದೆ, ಈ ಹೊನ್ನು
ಮಾಡಿರುವೆ ಬಯಲು, ಪರಮೇಶ್ವರನ ರಹಸ್ಯವನ್ನು

ಅನುದಿನದ ಸಾಧನೆ, ಏರಿಕೆ, ಪರಿಶುದ್ಧತೆಯ ಸಮೃದ್ಧಿ
ಅರಿವಿಗೆ – ನಿಗೂಢ ಪ್ರೀತಿಯ ಕೊಡುಗೆ, ಇದೇ ಶ್ರೀ ಸಿದ್ಧಿ.

4 thoughts on “ಪ್ರೀತಿ

  1. ಬಹಳ ಸುಂದರವಾಗಿದೆ ಮತ್ತೂ ಬಹು ಆಳವಾದ ಯೋಚನೆ 👍🙏

Leave a Reply

Your email address will not be published. Required fields are marked *