
ಒಳ ಚಕ್ಷುವಿನ ಜಾಗೃತಿ,
ನೋಟದಲಿನ ದೃಶ್ಯಾವಳಿಯ ಅನುಭೂತಿ,
ಬದಲು ಒಳಗೆ, ಆಂತರ್ಯ ಕೊಟ್ಟ ಸ್ಪೂರ್ತಿ,
ಸೂಸಿ ಹೊರಗೆ, ಆತ್ಮಸಾಕ್ಷಿ ಎಲ್ಲೆಡೆ ಪ್ರತಿಬಿಂಬಿಸಿ.
ಪಡೆದೆ ನಾ ಪ್ರೀತಿ ವಿಶ್ವಾಸದ ಧೃಡತೆ,
ಎಲ್ಲಾ ನಮ್ಮವರೇ ಎನ್ನುವ ಆತ್ಮೀಯತೆ,
ವ್ಯತ್ಯಾಸವ ಜಯಿಸಿದ ಸ್ನೇಹದ ಈ ಭವ್ಯತೆ,
ಸಂಭಂದಗಳ ಮೂಲ ಪ್ರೀತಿಯ ಪಾವಿತ್ರ್ಯತೆ.
ವಿಶಾಲತೆಯ ಪ್ರತಿಚ್ಚಾಯೆ, ಕಣದಲ್ಲೆಲ್ಲ ತ್ರಾಣ,
ನಿರ್ಮಲತೆಯ ತುಳುಕಾಡಿಕೆ, ಕಣ್ಣುಗಳಲಿ ಕರುಣ,
ಇಡೀ ಸೃಷ್ಟಿಯೇ ಆಯಿತು ನನ್ನ ಪ್ರೀತಿಯ ರಮಣ,
ಮುಗ್ಧತೆ ಎಲ್ಲೆಡೆ ವ್ಯಕ್ತ, ಆದೆ ನಾ ನಿನಗೆ ಶರಣ.
.

ಸುಂದರವಾದ ಬರವಣಿಗೆ,
Very nice poem advising us to reflect inside instead of outside 😇
ಶ್ರೇಷ್ಠ ತತ್ವದ ಕವಿತೆ 👌
Wonderful poem 🙏
Very nice
Very spiritual poem. Thanks for sharing 👍