ಮಗನ ಪ್ರೀತಿ

ಬಹಳ ಪ್ರೀತಿ ನನಲ್ಲಿ ಬಹಳ ಪ್ರೀತಿ
ಸುಲಭದಿ ಅರಿಯಲಾಗದು ಈ ಪ್ರೀತಿ

ಮೊದಲು ವರ್ತಿಸುವನು ಕೋಪದಿ
ಮಾತನಾಡುವನು ಮುಂಗೋಪದಿ
ಕರೆದರೆ ಹೇಳುವನು, ನಾ ಒಲ್ಲೆ
ಅದಕ್ಕೆ ಹೇಳುವೆ ನಾ, ನಾ ಬಲ್ಲೆ.

ಬರುವನು ಪ್ರೀತಿಯ ತೋರುವನು
ತಬ್ಬಿ ಕೊಂಡು ಮುದ್ದಾಡುವನು
ತನ್ನ ಬಲು ಇಷ್ಟದಿ ತಿಂಡಿ ಹಂಚುವನು
ಬೇಡವೆಂದರೂ ಪ್ರೀತಿಯಿಂದ ತಿನ್ನಿಸುವನು

ತಾಯಿಗೆ ತಿಳಿದಿದೆ ಮಗನ ಪ್ರೀತಿ
ಅಡಗದು ನನ್ನ ದೃಷ್ಟಿ ಕೋಣದಿ
ಬಹಳ ಪ್ರೀತಿ  ನನಲ್ಲಿ ಬಹಳಪ್ರೀತಿ
ಸುಲಭದಿ ಅರಿತೆ ನಾ ಈ ಪ್ರೀತಿ.

Leave a Reply

Your email address will not be published. Required fields are marked *