ನಮ್ಮ ಭಾರತ ದೇಶ

ನಮ್ಮ ಭಾರತ ದೇಶ ಶ್ರೇಷ್ಠ
ಸಂದೇಶವು ನೀಡುವುದು ವಿಶಿಷ್ಟ
ನಮ್ಮ ಧರ್ಮ ಸನಾತನವು, ಕೇಳಿರಿ,
ಅದರ ಜ್ಞಾನ ಅನಂತಸಾಗರ, ತಿಳಿಯಿರಿ,

ಎಲ್ಲರಲ್ಲೂ ಕಾಣುವುದು ನಾವು ಭಗವಂತ,
ಭಗವಂತ ಎಲ್ಲೆಡೆಯೂ, ನಾವೆಲ್ಲಾ ಸಿರಿವಂತ,
ಸೈರಣೆಯು ಇರುವುದು ನಮ್ಮೆಲ್ಲರ ಕಣಕಣದಲ್ಲಿ,
ಇದನ್ನು ತೆಗೆಯಲಾರೆವು ನಮ್ಮೆಲ್ಲರ ಈ ಜನುಮದಲ್ಲಿ,

ಆಕಾರ, ನಿರಾಕಾರ, ನಿಮಗೆಲ್ಲಾ ಬಿಟ್ಟಿದ್ದು,
ಜ್ಞಾನ, ರಾಜ, ಕರ್ಮ, ಭಕ್ತಿಯಿಂದ ಕೂಡಿದ್ದು,
ಪೂಜೆ, ಜಪ, ಧ್ಯಾನ , ಭಜನೆ, ನೀವು ನಂಬಿದ್ದು,
ಸೀಮಿತವಿಲ್ಲಾ, ಎಲ್ಲವೂ ಇಲ್ಲಿ ಕೂಡಿಯೇ ತುಂಬಿದ್ದು.

ಈ ನಾಡಿನಲ್ಲಿ ಜನಿಸಿದವರು, ಶೂರರು,
ಸಂತರು, ತ್ಯಾಗಿಗಳು, ವಿಶಿಷ್ಟ ಯೋಧರು,
ನಿಸ್ವಾರ್ಥ ಗುರುಗಳು, ಅವರು ಪೂಜ್ಯ ಸ್ವರೂಪ,
ಭಾರತ, ಹೊಳೆಯುವ ಒಂದು ವಿಶೇಷ ದಾರಿದೀಪ,

ನಮ್ಮಭಾರತ ದೇಶ ಸರ್ವಶ್ರೇಷ್ಠ, ಕಾಣಿರೋ,
ಸಂದೇಶವು ನೀಡುವುದು ವಿಶಿಷ್ಠ, ಅರಿಯಿರೋ,
ಇದನ್ನರಿತು ಜೀವನವಾಗುವುದು, ಖಚಿತ, ವಿಜಯ,
ಕುಡಿದು ಈ ದೇಶದ ಅದ್ಭುತವಾದ ಅಮೃತ ಪಾನೀಯ.

One thought on “ನಮ್ಮ ಭಾರತ ದೇಶ

Leave a Reply

Your email address will not be published. Required fields are marked *