ನಿದ್ರೆಯಲ್ಲಿದೆ ಆರೋಗ್ಯ,
ಇತಿಮಿತಿಯಾದ ನಿದ್ರೆಯಲ್ಲಿದೆ ಆರೋಗ್ಯ,
ನಾನು ಹೇಳುವುದು ಏನೂ ಹೊಸತಲ್ಲ,
ಹೇಳುವೆ ಪುನಃ, ಎಲ್ಲಾ ಮರೆತಿಹರಲ್ಲ,
ಪ್ರಕೃತಿಯೊಂದಿಗೆ ಹೊoದಾಣಿಸು,
ಪ್ರಕೃತಿ ಅನುಗುಣವಾಗಿ ನಿದ್ರಿಸು,
ನಿದ್ರೆಯು ಐಚ್ಚಿಕವಲ್ಲ, ಖಡ್ಡಾಯ ವಯ್ಯ,
ಆರೋಗ್ಯ ಕಾಪಾಡುವ ಒಂದು ಶಿಸ್ತಯ್ಯ,
ಇತಿಮಿತಿಯಲ್ಲಿದ್ದರೆ ಸಹಾಯ,
ಇಲ್ಲದಿದ್ದರೆ ಆಗುವುದು ತಾಪತ್ರಯ.

