ಕುಣಿದಾಡು ನಲಿ ನಲಿ ದಾಡು,
ಮಳೆಯ ಕಂಡು, ಕುಣಿ ನಲಿ ದಾಡು
ಗುಡುಗು ಸಿಡಿಲಿನಿಂದ ಹುಟ್ಟುವುದು ಮಳೆ
ಎತ್ತರದಿಂದ ಬಿದ್ದರು ಇರುವುದು ತಂಪು ಹೊಳೆ
ಎಲ್ಲೆಡೆ ಬಿದ್ದು ಹರಡುವುದು ಸುರಿಮಳೆ
ಪ್ರಕೃತಿಯ ಆಲಿಂಗನ ಆಗುವುದು ಕೂಡಲೇ.
ಎಲ್ಲೆಡೆ ಕಾಣುವುದು ಮಳೆಯ ಕಾಂತಿ
ಎಲ್ಲೆಡೆ ಪ್ರಕೃತಿಯ ಪ್ರಕಟ ಹಸಿರು ಶಾಂತಿ
ಯಾರು ಅರಿತಿಹರು ಇದನ್ನು ಪೂರ್ತಿ
ತಾಯಿಯ ಸಮಾನ ಇದರ ಗುಣ ಕೀರ್ತಿ.

