ಪ್ರೋತ್ಸಾಹ

blue jeans
blue jeans

ಪ್ರೋತ್ಸಾಹ ನೀಡುವುದು ಒಂದು ಸಗುಣಕಾರಿ
ಎಲ್ಲಕ್ಕೂ ತೋರುವುದು ಸ್ಪೂರ್ತಿಯ ದಾರಿ

ಹಿಂಜರಿದವಗೆ  ಕೊಡುವುದು ಪ್ರಯತ್ನದ ಹೆಜ್ಜೆ
ಆತ್ಮವಿಶ್ವಾಸ ಇಲ್ಲದವಗೆ ಧರಿಸಲು ವಿಶ್ವಾಸದ ಗೆಜ್ಜೆ

ಅಡಗಿರುವ ಪ್ರತಿಭೆಯ ಹೊರತೆರೆವ ರಸಮಾಲೆ
ಹೆಚ್ಚೆಚ್ಚು ಮಾಡಲು ನೀಡುವ ಸುಗಂಧದ ಹೂಮಾಲೆ

ಈ  ಪ್ರೋತ್ಸಾಹದ ಹನಿಯಲ್ಲಿದೆ ಶಕ್ತಿಯ ಖಣಿ
ಸಾಗರವನ್ನೇ ಸೃಷ್ಟಿಸ ಬಲ್ಲದು ಈ ಹೃದಯ ವಾಣಿ

ನಿರುತ್ಸಾಹ ಕೊಲ್ಲುವುದು ಮೊಳಕೆಯಲ್ಲೇ ತಡಿ
ಪ್ರೋತ್ಸಾಹಿಸೋಣ ಎಲ್ಲರೂ ಕೈ ನೀಡಿ

Leave a Reply

Your email address will not be published. Required fields are marked *