
ಜಡ ನಾನಲ್ಲ ನಾನಾಗುವುದಿಲ್ಲ ಬಾಳಿನಲಿ
ಪ್ರಾಣಶಕ್ತಿ ಹರಿಯುತ್ತಿದೆ ನನ್ನ ಈ ಬ್ರಹ್ಮಾಂಡದಲಿ
ಕೂತಲ್ಲೇ ಕುಳಿತಿರುವುದಲ್ಲ ಚೇತನದ ಉಪದೇಶ
ಬಾಳಿ ಬದುಕುವುದೇ ಈ ಜೀವಸತ್ವದ ದಿವ್ಯಸಂದೇಶ
ವಸಂತ ಋತುವಿನ ಉತ್ಸಾಹ ಉಕ್ಕಿಹರಿಯುತಿದೆ
ಶಕ್ತಿ ತುಂಬಿ ವ್ಯಾಪಿಸಿಕೊಳ್ಳಲು ತುಳುಕಾಡುತಿದೆ
ಸೌಂದರ್ಯಯುಕ್ತ ಪರಿಮಳ ಎಲ್ಲೆಡೆ ಹರಡುತಿದೆ
ನನ್ನ ವೇಗವ ಕಂಡು ಎಲ್ಲೆಡೆ ಸ್ಫೂರ್ತಿ ಹೊಂದುತಿದೆ
ಸಮಯ ಕಳೆದುಕೊಳ್ಳುವುದಿಲ್ಲ ಅಲ್ಲಿಯತನಕ
ಬಾಳಿ ತೋರಿಸುವೆ ಪಕ್ವವಾಗುವತನಕ.

Very nice 🙏
Thumba chennagide 🙏
“ಜಡ” – ಬರೆದಂತೆಲ್ಲ ನಿಮ್ಮ ಪದ್ಯಗಳು ಹೆಚ್ಚು ಸೊಗಸಾಗಿ ಬರುತ್ತಿವೆ. ಚೇತನದ ಚಿಲುಮೆ ಉಕ್ಕುತ್ತಿದೆ
ಧನ್ಯವಾದಗಳು
ಚೇತನ ಚಲಿಸುತ್ತದೆ ಜಡಕ್ಕೆ ಚಲನೆ ಇಲ್ಲಾ. ಜಡ ನಾಗಬೇಡ
ಚಲಿಸುತ್ತಿರು ಮುಂದೆ ನಡೆಯುವದೇ ಜೀವನ.ಹೂವಿನಂತೆ ನಿಸ್ವಾರ್ಥ ಸೇವೆ ಮಾಡಿ ಚೇತನ ಇರುವವರೆಗೆ ಬಾಳಿ ಬದುಕು ಸಮಯ ವ್ಯರ್ಥ ಮಾಡಬೇಡ ಎಂಬ ಸಂದೇಶ
ಅರ್ಥಪೂರ್ಣವಾದ ಸಂದೇಶ. ಚೆನ್ನಾಗಿದೆ
Very nicely framed
Very nice!