ಒಂದು ಹೂವಿನಿಂದ ಮತ್ತೂಂದು
ಹೂವಿಗೆ, ಹಾರುತಿರುವೆ ನಾನು,
ನನ್ನ ಬಣ್ಣವನ್ನೇ ಅರಿಯದ
ಬಣ್ಣ ಬಣ್ಣದ ಚಿಟ್ಟೆ ನಾನು
ಹೂದೋಟದಿಂದ ಹೂದೋಟಕ್ಕೆ
ಉಲ್ಲಾಸದಿ ಹೋಗುವೆನು ನಾನು,
ಕುಸುಮದಿಂದ ಕುಸುಮಕ್ಕೆ ಹಾರಿ
ಜೇನನ್ನು ಹುಡುಕುವೆನು ನಾನು
ವರ್ಣಮಯ ತೋಟದಲಿ ನಿರಂತರ
ಹುಡುಕಾಡಿ, ಜೇನನ್ನು ಸವಿಯುತ್ತಾ,
ಪ್ರತಿ ದಿನ ಈ ಮರುಳುಗೊಳಿಸುವ
ಸೆಳೆಯುವಿಕೆಯಲ್ಲಿ ಸಿಲುಕಿ ಸ್ವಾದಿಸುತ್ತಾ
ತೃಪ್ತಿಯನು ಪಡೆಯಲಿಲ್ಲ ನಾನಿನ್ನೂ
ತಿಳಿಯಲಾರೆ ಏಕೋ ನಾನಿದನ್ನು,
ಮನವು ಪುನಃ ಹಾತೊರೆಯುತ್ತಿದೆ
ಹುಡುಕ ಹೊರಟಿರುವೆ ಮಧುವನ್ನು

Very beautiful
🙏🙏👌🏻👌🏻👍🏻👍🏻👏🏻👏🏻 ತುಂಬಾ ಚೆನ್ನಾಗಿದೆ. ಹೀಗೆ ಮುಂದುವರಿಯಲಿ. ಅನಂತರ ಒಂದು ಪ್ರಕಟಿಸಿ. 🧘🏻♀️🙏🕉️
ಆಧ್ಯಾತ್ಮಿಕ ಕವಿತೆ ಬಂದು ಬಂದು ಭ್ರಮೆ ಗೊಂಡು ಮಾಯಾಪಾಶಕೆ ಸಿಲುಕಿ ಬೆಂದು ನೊಂದು ಪರಮಾತ್ಮ ನನ್ನು ಅರಿಯದೆ ಬಂಧನ ದಿಂದ ಪಾರಾಗದೆ ಮತ್ತೆ ಮತ್ತೆ ಬರುವಂತಾಗುವ ಮನುಷ್ಯ ನ ಕಥೆ ಚೆನ್ನಾಗಿದೆ
ಆಧ್ಯಾತ್ಮಿಕ ಕವಿತೆ ಬಂದು ಬಂದು ಭ್ರಮೆ ಗೊಂಡು ಮಾಯಾಪಾಶಕೆ ಸಿಲುಕಿ ಬೆಂದು ನೊಂದು ಪರಮಾತ್ಮ ನನ್ನು ಅರಿಯದೆ ಬಂಧನ ದಿಂದ ಪಾರಾಗದೆ ಮತ್ತೆ ಮತ್ತೆ ಬರುವಂತಾಗುವ ಮನುಷ್ಯ ನ ಕಥೆ ಚೆನ್ನಾಗಿದೆ
ಶೇಷೋ ಕುಲಕರ್ಣಿ