
ತಿಳಿಯಾಗ ಬಯಸುವೆನು ನಾನು
ಪದರಗಳನು, ಕಳಚಿ ಹಾಕುವೆನು ನಾನು
ಏನೆಲ್ಲಾ ಅಭಿಪ್ರಾಯಗಳಲ್ಲಿ, ಸಿಲುಕಿರುವೆ
ಎಷ್ಟೆಲ್ಲಾ, ಇಷ್ಟಗಳಲಿ ಬಾಳುತಿರುವೆ
ಈ ಮನಸ್ಸಿನ ಅಲೆಗಳಲಿ, ಈಜುತಿರುವೆ
ಪುನಃ ಪುನಃ, ಅದರಲ್ಲೇ ಮುಳುಗುತಿರುವೆ
ನನ್ನ ಭಾವನೆಗಳನ್ನು ಅಮಲಗೊಳಿಸುವೆ
ನನ್ನ ಮನಸನ್ನು ಎತ್ತರಕ್ಕೆ ಕರೆದೊಯ್ಯುವೆ
ನಾನೇ ನನ್ನನ್ನು ಸ್ವಲ್ಪ ಬದಿಗಿಡುವೆ
ಇತರರ ಭಾವನೆಗಳನ್ನು ಅರಿಯುವೆ
ನಾನೆಂಬುದು, ನನಲ್ಲಿ, ತಿಳಿಯಾಗುತಿಹುದು
ನನ್ನ ಧೃಷ್ಟಿಕೋಣದಲಿ, ಜಗತ್ತು, ಬದಲಾಗುತಿಹುದು

ಬಹಳ ಸೂಕ್ಷ್ಮ ಮತ್ತು ತಿಳಿಯಾದ ಸಂದೇಶ, ಸುಂದರವಾಗಿದೆ!! 👍👍
ತಿಳಿಯಾದ ಸಂದೇಶ ತಿಳಿಯುವ ಹಾಗಿದೆ ತಿಳಿಯಾಗಿದೆ
ತಿಳಿಯಾಗ ಬೇಕಾದರೆ ಏನು ಕಳೆಯಬೇಕು ಸ್ಪಷ್ಟವಾಗಿದೆ
ತಿಳಿಯಲು ತನ್ನೊಳಗೆ ತಾನು ತಿಳಿಯಬೇಕು.ಕಲುಕಿದ ನೀರನ್ನು ತಿಳಿಗೊಳಿಸಬೇಕು.ಅಡೆತಡೆ ಕಸಕಡ್ಡಿ ನೀವಾರಿಸಲು ತಿಳಿದಿರಬೇಕು. ನಿಸ್ವಾರ್ಥನಾಗಿ ತಿಳಿಯಗಬೇಕು. ಶೇಷೋ.