ಕನ್ನಡ ತಾಯಿ

ಮೊಟ್ಟಮೊದಲನೇ ಅಕ್ಷರಗಳ ತುತ್ತು
ನೀಡಿದ ನನ್ನ ಮಾತೃಭಾಷೆಗೆ ನಮೋಸ್ತು

ಕಲಿತೆ ಮಾತನಾಡುವ ಪ್ರಕ್ರಿಯೆ ನಿನ್ನಿಂದ
ತೊದಲುನುಡಿ ಇಂದ ಶಬ್ದಗಳ ಸರಳಿ ಎಷ್ಟು ನೀ ಚಂದ

ನುಡಿಯುವುದನ್ನು ಕಲಿತೆ ನಿನ್ನ ಸುಂದರ ರೂಪದಿಂದ
ಉಚ್ಚಾರ ವಾಕ್ ಶಕ್ತಿ ದೊರೆಯಿತು ನಿನ್ನ ಕೃಪೆಯಿಂದ

ನಿನಗೆ ನಾನು ಚಿರರುಣಿ, ನಮಿಸುವೆ ಸದಾ ಸನ್ಮಾನ
ನನ್ನ ಹೃದಯ ಕಮಲದಲ್ಲಿ ಕಟ್ಟಿರುವೆ ವಿಶೇಷ ವಾದ ಸ್ಥಾನ

ನಿನ್ನೊಡನೆ ಕೂಡಿ ಬಾಳುವುದು ಅಭಿಮಾನ ಪ್ರೀತಿ
ನೀನು ಮುತ್ತಿನಿಂದ ಕೂಡಿದ ಮೂರ್ತಿ, ಪ್ರಾಚೀನ ನಿನ್ನ ಕೀರ್ತಿ

9 thoughts on “ಕನ್ನಡ ತಾಯಿ

  1. ಬಿ ಎಂ ಶ್ರೀಯವರ “ಕಾಣಿಕೆ” ಪದ್ಯ ನೆನಪಿಗೆ ತಂದಿತು.
    ಹೀಗೇ ಬರೆಯುತ್ತಿರಿ.

  2. ಕನ್ನಡದ ಬಗ್ಗೆ ಪ್ರೀತಿ , ಹೆಮ್ಮೆ ಚೆನ್ನಾಗಿ ಮೂಡಿ ಬಂದಿದೆ , ಧನ್ಯವಾದಗಳು

Leave a Reply

Your email address will not be published. Required fields are marked *