
ಎಲ್ಲಿ ಅಡಗಿದೆ ಸಂತೋಷ,
ಸರಳತೆ ಎಲ್ಲೋ, ಆಡಂಬರ ದಲ್ಲೋ
ಇದನು ಅರಿತರೆ, ಪಾಲಿಗೆ ಬಂದ ಗೆಲುವು,
ಇದರ ತೋರುಗೋಲು, ಬಾಳಿಗೆ ತಿರುವು,
ಬಾಳಿನ ಸಿಹಿ ಕ್ಷಣಗಳನು, ಮೆಲುಕಾಡಿಸು,
ಮೂಡುವುದು, ರಸವತ್ತಾದ, ಸಿಹಿ ತಿನುಸು,
ಅಧ್ಭುತ ಕ್ಷಣಗಳ, ಸ್ವಾದದ, ಎಂಥಾ ಸೊಗಸು,
ಸವಿಯುತ್ತಾ ಕುಳಿತರೆ, ತುಂಬಿದ, ಸುಖ ಮನಸು.
ಬಹಳ ಸರ್ವೇ ಸಾಮಾನ್ಯ, ಇವುಗಳ ಬಗೆ ಆಗಿದ್ದು,
ಸರಳತೆಯಲ್ಲಿ ಉದ್ಭವಿಸಿ, ಆಡಂಬರವೇ ಇಲ್ಲದ್ದು,
ಮುದವನು ಸೃಷ್ಟಿಸಿ, ನಗುವಾಗಿ ಸ್ಪೋಟಿಸಿದ್ದು,
ಉಲ್ಲಾಸದ ಅಲೆಗಳಾಗಿ, ವಿಸ್ಮಯ ಗೊಂಡಿದ್ದು.
ಹಣ ಕಾಸಿನ ನೆನಪು, ಸ್ಮೃತಿಯಿಂದ ಕಳಚಿ ಬಂದು,
ಸಂಕೀರ್ಣವಲ್ಲದ ಸ್ವರೂಪ, ಸೆಳೆಯುವಿಕೆಯ ಬಿಂದು,
ಕ್ಲಿಷ್ಟವಿಲ್ಲದ ಸಹಜ ಸ್ಥಿತಿ, ನಮ್ಮದೇ, ಅರಿವು ತಂದು,
ಹಂಚಿಕೊಳ್ಳುವೆ ರಹಸ್ಯವನು, ಕೇಳಿರಿ, ನೀವು ಇಂದು.
ನಿರ್ಮಲ ಅನುಭವಗಳು, ಆಂತರ್ಯಕ್ಕೆ ಸಮೀಪ,
ಅಡಗಿ ಕೂತಿದೆ ಒಳಗೆ, ಸಂತೋಷದ ನಂದಾದೀಪ.

Nice ….. Dads emotional poems daughter..too Delivers the same.. Keep it up.
ಕವಿತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಂತರಂಗದಲಿ ಅಡಗಿದೆ ಸಂತೋಷ ನೆಮ್ಮದಿ ಹೊರಗಡೆ ಹುಡುಕಿದರೆ ಸಿಗಲಾರದು ಶಾಶ್ವತ ಸಂತೋಷ.
ಸೂಪರ್! ಅಡಗಿದ ಸಂತೋಷದಲ್ಲಿ ಅಡಗಿದೆ ಸಂದೇಶ! ವ್ಹಾ!👍
Very nice
Very beautifully written, nice message.
Nice poem well explained to search happiness
Nice message for all Happiness is within us,we are searching it somewhere outside.
Kavithe chennagi moodibandide hrudayakke hathiravagide
Priceless use of words 🙏💐
Fills the senses 💐
Thanks for enriching our lives 🙏
Superagide 👍
Very beautiful poem 🌺