
ಮನಸಿಗೆ ಎಂತಹ ಸಾಂತ್ವನ, ಮನದಟ್ಟು ಆಗಿರಲು
ಇನ್ನು ಮರೆಯಾಗಿರದು, ಅಮೃತದ ಈ ಕಡಲು
ನನ್ನಲ್ಲಿದ್ದರೆ ನನಗೇಕೆ ಆತಂಕ, ಚಿಂತೆಗೆ ಸೋಲು
ನನ್ನಲಿ ಅಡಗಿ ಕೂತಿದೆ, ಆಸೆ ಅದನು ಪಡೆಯಲು
ಇಡೀ ಜಗತನ್ನೇ ಹುಡುಕಾಡಿ, ಕೊಟ್ಟಿತು ಬಿಸಿ ಕಾವು
ಹುಡುಕಾಡಿಕೆ ನನ್ನಲ್ಲೇ, ಅದರ ಅರಿವೇ, ರುಚಿ ಮಾವು
ನಿಶ್ಚಲ ಕುಳಿತು, ಅಂತರಂಗದ ಶೋಧನೆ, ಸಿಹಿ ಮೇವು
ಒಳಗೆ ಮನ ಹರಿಯಲು, ಅಗಲುವುದು ಕಹಿ ನೋವು
ಪೂರ್ಣಿಮೆಗೆ ಚಂದಿರ ಪ್ರಕಟಿಸುವನು, ಇಡೀ ತನ್ನ ರಹಸ್ಯ
ಸೌಂದರ್ಯ ಸಂಪೂರ್ಣ ಬಯಲು, ಎಂತಹ ಆ ದೃಶ್ಯ
ಪಾವಿತ್ರ್ಯತೆ ಹೆಚ್ಚುತ್ತಾ, ತಮಸ್ಸಿನ ಇಳಿತ, ಕೊನೆಗೆ ಅಂತ್ಯ
ದೊರೆಯಿತು, ಅಂತರಂಗದ ಅಚಿಂತ್ಯ ಅಮೂಲ್ಯ ಸತ್ಯ.

Wonderful
Nice emtional… Expression with beautiful words..
ಅಮೋಘ ಸತ್ಯ 🌸 ತಿಳಿದವರು ಭಾಗ್ಯವಂತರು🙏
ಸುಂದರ ಕವಿತೆ 👌 Please keep sharing. Also the pictures you use are very meaningful, creates the right mood for the poem. 👍